ಹನೂರು: ಅಕ್ರಮ ಮಧ್ಯ ಸಾಗಾಟ; ಇಬ್ಬರು ಆರೋಪಿಗಳ ಬಂಧನ
ಹನೂರು,ಅ.2: ಅಕ್ರಮವಾಗಿ ಮಧ್ಯ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ರಾಮಾಪುರ ಪೋಲಿಸ್ ಠಾಣೆ ಸಿಬ್ಬಂದಿ ಬಂಧಿಸಿದ್ದಾರೆ.
ಹನೂರು ತಾಲೂಕಿನ ಗಾಜನೂರು ಗ್ರಾಮದ ಗಿರೀಶ್ (25) ಮುನಿಯಪ್ಪ(35)ಬಂಧಿತ ಆರೋಪಿಗಳು
ಇವರಿಬ್ಬರು ವಿವಿಧ ಗ್ರಾಮಗಳಿಗೆ ಆಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಮದ್ಯ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೋಲಿಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ನಾಗೇಶ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು, ಆರೋಪಿಗಳಿಂದ 288 ಪೌಚ್‍ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story





