ಎಸಿಯಿಂದ ಹೊರಬಂದ ವಿಷಗಾಳಿ: ಒಂದೇ ಕುಟುಂಬದ ಮೂವರು ಮೃತ್ಯು

ಚೆನ್ನೈ, ಅ.2: ಕೆಟ್ಟು ಹೋದ ಏರ್ ಕಂಡೀಶನರ್ (ಎಸಿ)ನಿಂದ ಹೊರಬಂದ ವಿಷಗಾಳಿ ಸೇವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಚೆನ್ನೈಯಲ್ಲಿ ನಡೆದಿದೆ.
35 ವರ್ಷದ ವ್ಯಕ್ತಿ, ಅವರ ಪತ್ನಿ ಹಾಗು ಪುತ್ರ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಸೋಮವಾರ ಹಲವು ಗಂಟೆಗಳಾದರೂ ಮನೆಯಿಂದ ಯಾರೂ ಹೊರಬರದ ಕಾರಣ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಾಗಿಲು ಒಡೆದು ಮನೆಯೊಳಕ್ಕೆ ನುಗ್ಗಿದಾಗ ಮೂವರು ಮೃತಪಟ್ಟಿರುವುದು ಕಂಡುಬಂದಿದೆ.
ಇಲ್ಲಿನ ಕೋಯಂಬೇಡುವಿನ ತಿರುವಳ್ಳುವರ್ ನಗರದಲ್ಲಿ ಇವರು ವಾಸಿಸುತ್ತಿದ್ದರು. ಈ ಪ್ರದೇಶದಲ್ಲಿ ಪವರ್ ಕಟ್ ಇದ್ದುದರಿಂದ ದಂಪತಿ ಎಸಿ ಸ್ವಿಚ್ ಹಾಕಿದ್ದರು.
Next Story





