ಸೇತುವೆಗೆ ಬೈಕ್ ಢಿಕ್ಕಿ: ಇಬ್ಬರು ಮೃತ್ಯು

ಮಂಡ್ಯ, ಅ.2: ರಸ್ತೆಬದಿ ಸೇತುವೆಗೆ ಬೈಕ್ ಢಿಕ್ಕಿ ಹೊಡೆದು ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕಿನ ಕನ್ನಹಳ್ಳಿ ಬಳಿ ನಡೆದಿದೆ.
ಮಳವಳ್ಳಿ ತಾಲೂಕಿನ ಕುರುಬನಪುರದ ಚನ್ನೇಗೌಡ(51) ಹಾಗೂ ಆತನ ಸ್ನೇಹಿತ ಸಾವನ್ನಪ್ಪಿದವರು ಎಂದು ಕಿರುಗಾವಲು ಪೊಲೀಸರು ತಿಳಿಸಿದ್ದಾರೆ.
ಬೈಕ್ ಆಯತಪ್ಪಿ ಸೇತುವೆಗೆ ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಯ ಮೇಲೆ ಬಿದ್ದು ಒರ್ವ ಮೃತಪಟ್ಟಿದ್ದು, ಮತ್ತೊಬ್ಬ ವ್ಯಕ್ತಿ ಸೇತುವೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.
Next Story





