ಇಬ್ಬರು ಕ್ರಿಮಿನಲ್ ಆರೋಪಿಗಳಿಗೆ ಬೀಚ್ ಸ್ವಚ್ಛಗೊಳಿಸುವ ಶಿಕ್ಷೆ ನೀಡಿದ ಹೈಕೋರ್ಟ್

ಮುಂಬೈ, ಅ. 2: ಇಬ್ಬರ ವಿರುದ್ಧದ ಕ್ರಿಮಿನಲ್ ಬೆದರಿಕೆ ಪ್ರಕರಣವನ್ನು ಬಾಂಬೆ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ ಹಾಗೂ ಮುಂಬೈಯಲ್ಲಿ ಕಡಲ ತೀರ ಸ್ವಚ್ಛಗೊಳಿಸಲು ನೆರವು ನೀಡುವ ಮೂಲಕ ಒಂದು ತಿಂಗಳ ಕಾಲ ಸಮುದಾಯ ಸೇವೆ ಮಾಡಲು ನಿರ್ದೇಶಿಸಿದೆ.
ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸರು 2017 ಸೆಪ್ಟಂಬರ್ 10ರಂದು ತಮ್ಮ ವಿರುದ್ಧ ದಾಖಲಿಸಿದ ಪ್ರಥಮ ಮಾಹಿತಿ ವರದಿ ರದ್ದುಗೊಳಿಸುವಂತೆ ಕೋರಿ ನಗರದ ನಿವಾಸಿಗಳಾದ ಅಂಗದ್ ಸಿಂಗ್ ಸೇಥಿ (22), ಕುನ್ವರ್ ಸಿಂಗ್ ಸೇಥಿ (25) ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಂಜಿತ್ ಮೋರೆ ಹಾಗೂ ಭಾರ್ತಿ ದಾಂಗ್ರೆ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು. ಕಳೆದ ವರ್ಷ ಈ ಇಬ್ಬರು ಹೊಟೇಲ್ ಮಾಲಿಕರೋರ್ವರಿಗೆ ನಕಲಿ ಗನ್ ತೋರಿಸಿ ಬಾಗಿಲು ತೆರೆದು ತಿನಿಸು ನೀಡುವಂತೆ ಬೆದರಿಕೆ ಒಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೊಟೇಲ್ ಮಾಲಕ ಅನಂತರ ಪೊಲೀಸರಲ್ಲಿ ದೂರು ನೀಡಿದ್ದ ಹಾಗೂ ಪ್ರಕರಣ ದಾಖಲಿಸಿದ್ದರು.
Next Story





