ರೈತರ ರ‍್ಯಾಲಿಗೆ ತಡೆ
ಕೃಷಿ ಸಾಲ ಮನ್ನಾ ಹಾಗೂ ತೈಲ ಬೆಲೆಯಲ್ಲಿ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಉತ್ತರ ಪ್ರದೇಶದಿಂದ ರಾಷ್ಟ್ರ ರಾಜಧಾನಿ ದಿಲ್ಲಿ ಪ್ರವೇಶಿಸಿದ ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ‘ಕಿಸಾನ್ ಕ್ರಾಂತಿ’ ಪಾದಯಾತ್ರೆಯನ್ನು ಪೊಲೀಸರು ತಡೆದಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಚದುರಿಸಲು ಜಲಫಿರಂಗಿ ಹಾಗೂ ಅಶ್ರುವಾಯು ಬಳಸಿದ್ದಾರೆ. ‘ಕಿಸಾನ್ ಕ್ರಾಂತಿ ಯಾತ್ರೆ’ಯ ಭಾಗವಾಗಿ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಹಾಗೂ ಹರ್ಯಾಣದ 70 ಸಾವಿರಕ್ಕೂ ಅಧಿಕ ರೈತರು ಸೋಮವಾರ ಉತ್ತರಪ್ರದೇಶದ ಶಾಹಿದಾಬಾದ್‌ನಿಂದ ದಿಲ್ಲಿಗೆ ಪಾದ ಯಾತ್ರೆಯಲ್ಲಿ ಆಗಮಿಸಿದರು. ಪಾದಯಾತ್ರೆ ದಿಲ್ಲಿಯಲ್ಲಿರುವ ಕಿಸಾನ್ ಘಾಟ್‌ಗೆ ತೆರಳುವ ಉದ್ದೇಶ ಹೊಂದಿತ್ತು.
Next Story





