ಜುನೈದ್ ಖಾನ್ ಹತ್ಯೆ ಪ್ರಕರಣ: ಮುಖ್ಯ ಆರೋಪಿಗೆ ಜಾಮೀನು

ಹೊಸದಿಲ್ಲಿ, ಅ.3: ಜುನೈದ್ ಖಾನ್ ಹತ್ಯೆ ಪ್ರಕರಣದ ಮುಖ್ಯ ಆರೋಪಿ ನರೇಶ್ ಕುಮಾರ್‌ಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಬುಧವಾರ ಮಧ್ಯಂತರ ಜಾಮೀನು ಮಂಜೂರುಗೊಳಿಸಿದೆ. ಇದರೊಂದಿಗೆ ಪ್ರಕರಣದ ಎಲ್ಲಾ ಆರೋಪಿಗಳೂ ಜಾಮೀನು ಪಡೆದಂತಾಗಿದೆ.
ನರೇಶ್ ಕುಮಾರ್ ಎಂಬಾತ 2017ರ ಜುಲೈ 8ರಿಂದ ಜೈಲಿನಲ್ಲಿದ್ದಾನೆ. ಈ ಪ್ರಕರಣದ ವಿಚಾರಣೆಯನ್ನು ವಿಚಾರಣಾ ನ್ಯಾಯಾಲಯದಲ್ಲಿ ನಡೆಸುವುದಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಮಂಜೂರುಗೊಳಿಸಿರುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ. ನರೇಶ್ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿರುವುದರಿಂದ ಮಧ್ಯಂತರ ಜಾಮೀನು ಮಂಜೂರುಗೊಳಿಸಬೇಕು ಎಂದು ವಕೀಲರು ವಾದಿಸಿದ್ದರು.
Next Story





