ಅ.28 ರಂದು ಪಂಚಾಯತ್ ಉಪ ಚುನಾವಣೆ
ಬೆಂಗಳೂರು, ಅ. 3: ಅವಧಿ ಮುಕ್ತಾಯ ಹಾಗೂ ವಿವಿಧ ಕಾರಣಗಳಿಗಾಗಿ ತೆರವಾಗಿರುವ ಗ್ರಾ.ಪಂ., ತಾ.ಪಂ ಹಾಗೂ ಜಿ.ಪಂ.ಗಳಲ್ಲಿನ ಸದಸ್ಯ ಸ್ಥಾನಗಳಿಗೆ ಅ.28ಕ್ಕೆ ಉಪ ಚುನಾವಣೆ ಘೋಷಿಸಿ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಂಗಬೆಟ್ಟು, ಹಾಸನ ಜಿಲ್ಲೆ ಅರಕಲಗೂಡಿನ ರಾಮನಾಥಪುರ, ಚಾಮರಾಜನಗರ, ಗುಂಡ್ಲುಪೇಟೆಯ ತೆರಕಣಾಂಬಿ ತಾ.ಪಂ ಹಾಗೂ ಬೆಂಗಳೂರು ನಗರ ಜಿಲ್ಲೆಯ ಆವಲಹಳ್ಳಿ, ರಾಮನಗರ ಜಿಲ್ಲೆಯ ಮಾಗಡಿಯ ಕುದೂರು.
ಶಿವಮೊಗ್ಗ ಜಿಲ್ಲೆ ಸಾಗರದ ಆವಿನಹಳ್ಳಿ, ಮೈಸೂರಿನ ಟಿ.ನರಸೀಪುರದ ಸೋಮನಾಥಪುರ, ಕಲಬುರ್ಗಿಯ ಸೇಡಂ ತಾಲೂಕಿನ ಆಡಕಿ ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಜಿ.ಪಂ. ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.
ಅಲ್ಲದೆ, ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಮೋಘಾ ಗ್ರಾ.ಪಂ. ಹಾಗೂ ಯಾದಗಿರಿ ಜಿಲ್ಲೆಯ ಶೋರಾಪುರ ತಾಲೂಕಿನ ಕರಡಕಲ್ ಮತ್ತು ಕಿರದಳ್ಳಿ ಗ್ರಾಮ ಪಂ.ಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಅಧಿಸೂಚನೆ: ಅ.13ಕ್ಕೆ ಆಯಾ ಜಿಲ್ಲೆ ಜಿಲ್ಲಾಧಿಕಾರಿಗಳು ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಅ.16 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಅ.17ಕ್ಕೆ ನಾಮಪತ್ರ ಪರಿಶೀಲನೆ, ಅ.20ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ.
ಅ.28ರ ರವಿವಾರ ಬೆಳಗ್ಗೆ ಬೆಳಗ್ಗೆ 7ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಅ.31ರ ಬುಧವಾರ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಚುನಾವಣೆ ನಡೆಯಲಿರುವ ಮೇಲ್ಕಂಡ ಜಿಲ್ಲಾ ಹಾಗೂ ತಾಲೂಕು ಪಂ. ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅ.13ರಿಂದ ಅ.31ರ ವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಬುಧವಾರ ಆದೇಶ ಹೊರಡಿಸಿದೆ.







