ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರದ ನೋಬೆಲ್

ಸ್ಟಾಕ್‌ಹೋಂ, ಅ.3: ಡಾರ್ವಿನ್‌ನ ವಿಕಸನವಾದವನ್ನು ಬಳಸಿ ಹೊಸ ರಾಸಾಯನಿಕಗಳು ಮತ್ತು ಔಷಧಿಗಳಿಗೆ ಕಿಣ್ವಗಳನ್ನು ಉತ್ಪಾದಿಸುವ ಸಂಶೋಧನೆಗಾಗಿ ವಿಜ್ಞಾನಿಗಳಾದ ಫ್ರಾನ್ಸೆಸ್ ಅರ್ನಾಲ್ಡ್, ಜಾರ್ಜ್ ಸ್ಮಿತ್ ಹಾಗೂ ಗ್ರೆಗೊರಿ ವಿಂಟರ್‌ಗೆ 2018ನೇ ಸಾಲಿನ ರಸಾಯನಶಾಸ್ತ್ರದ ನೋಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಬಾರಿ ರಸಾಯನಶಾಸ್ತ್ರ ವಿಭಾಗದ ನೋಬೆಲ್ ಪುರಸ್ಕೃತರು ವಿಕಸನವಾದದಿಂದ ಸ್ಫೂರ್ತಿ ಪಡೆದುಕೊಂಡಿದ್ದಾರೆ ಮತ್ತು ಅದರ ತತ್ವಗಳಾದ ಅನುವಂಶೀಯ ಬದಲಾವಣೆ ಮತ್ತು ಆಯ್ಕೆಯನ್ನು ಮಾನವ ಜನಾಂಗದ ರಾಸಾಯನಿಕ ಸಮಸ್ಯೆಗಳನ್ನು ನಿವಾರಿಸಬಲ್ಲ ಪ್ರೊಟೀನ್‌ಗಳನ್ನು ಅಭಿವೃದ್ಧಿಪಡಿಸಲು ಬಳಸಿದ್ದಾರೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸೆಸ್ ತಿಳಿಸಿದೆ. ಬುಧವಾರ ನೀಡಲಾದ ಈ ಪುರಸ್ಕಾರವು 9 ಮಿಲಿಯನ್ ಸ್ವೀಡಿಶ್ ಕ್ರೌನ್ ಅಂದರೆ ಸುಮಾರು 6,38,95,000ರೂ. ನಗದು ಬಹುಮಾನವನ್ನೊಳಗೊಂಡಿದೆ. ಈ ವಾರದ ಆರಂಭದಲ್ಲಿ ಔಷಧಿ ಮತ್ತು ಭೌತಶಾಸ್ತ್ರ ಕ್ಷೇತ್ರದ ನೋಬೆಲ್ ವಿಜೇತರನ್ನು ಘೋಷಿಸಲಾಗಿತ್ತು.
Next Story





