ಅಂದರ್ ಬಾಹರ್: ಆರು ಮಂದಿ ಸೆರೆ
ಬೈಂದೂರು, ಅ.3: ಪಡುವರಿ ಗ್ರಾಮದ ಜೋಗೂರು ಎಂಬಲ್ಲಿ ಅ. 2ರಂದು ಅಪರಾಹ್ನ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ತೆಗ್ಗರ್ಸೆಯ ಸೋಮಶೇಖರ್ (38), ಜೋಗೂರುವಿನ ದೀಪಕ್ (21), ಸುರೇಶ (30), ದಿಲೀಪ್ (18), ಸುಧಾಕರ (26), ಉಳ್ಳೂರಿನ ಸಂತೋಷ್ ಪೂಜಾರಿ(29) ಎಂಬವರು ಬಂಧಿತ ಆರೋಪಿಗಳು. ಇವರಿಂದ 2150 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





