ಅ.6ರಿಂದ ಬೆಂಗಳೂರಿನಲ್ಲಿ ‘ಕ್ರಡೈ’ ರಿಯಾಲ್ಟಿ ಎಕ್ಸ್‌ಪೊ
ಬೆಂಗಳೂರು, ಅ. 4: ‘ಕ್ರಡೈ’ ಬೆಂಗಳೂರಿನ ರಿಯಾಲ್ಟಿ ಎಕ್ಸ್‌ಪೊ-2018 ಅ.6 ಮತ್ತು 7ರಂದು ಮಾರತ್‌ಹಳ್ಳಿಯಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಆರಂಭವಾಗಲಿದ್ದು, ಪ್ರತಿಷ್ಟಿತ ಡೆವಲಪರ್ಸ್‌ಗಳು ಸೇರಿದಂತೆ 40ಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಕಂಪೆನಿಗಳು ಪಾಲ್ಗೊಳ್ಳಲಿವೆ.
ಬೆಂಗಳೂರು ನಗರದಲ್ಲಿ ವಸತಿ ಬೇಡಿಕೆಗಳು ಹೆಚ್ಚುತ್ತಿದ್ದು, ಪೂರೈಕೆಯೂ ಅದೇ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿದೆ. ಐಟಿ-ಐಟಿ ಸಂಬಂಧಿತ ಹಾಗೂ ಸ್ಟಾರ್ಟ್‌ಅಪ್ ಸಂಸ್ಥೆಗಳು ಸಕಾರಾತ್ಮಕವಾಗಿ ತಮ್ಮ ಬೇಡಿಕೆಗಳನ್ನು ಮಂಡಿಸುತ್ತಿವೆ. ಜಿಎಸ್ಟಿ ಚಾಲನೆ, ನೋಟು ಅಮಾನ್ಯೀಕರಣ ಹಾಗೂ ರೇರಾ ಕಾಯ್ದೆ ಜಾರಿಯಾದ ಹಿನ್ನೆಲೆ ಈ ಕ್ಷೇತ್ರದ ಮೇಲೆ ಪರಿಣಾಮ ಉಂಟಾಗಿದೆ. ಆ ಬಳಿಕ ವಿಶ್ವಾಸಾರ್ಹ ಹಾಗೂ ನಂಬಿಕಸ್ಥ ಸಂಸ್ಥೆಗಳು ಮಾತ್ರ ಈ ಕ್ಷೇತ್ರದಲ್ಲಿ ಜೀವಂತವಾಗಿ ಉಳಿದಿವೆ. ಇವು ಧನಾತ್ಮಕ ಪರಿಣಾಮಗಳಾಗಿ ಮಾರ್ಪಟ್ಟಿದ್ದು, ಮನೆ ಖರೀದಿ ಪ್ರಕ್ರಿಯೆ ಸರಳ ಹಾಗೂ ಸುಲಭವಾಗಿ ಮಾರ್ಪಡುವಂತೆ ಮಾಡಿದೆ. ಅಲ್ಲದೆ ಖರೀದಿದಾರರಿಗೆ ಎಲ್ಲಾ ಸಮಯ ಬದ್ಧತೆಯ ಜತೆಗೆ ಭರವಸೆದಾಯಕ ಸೌಕರ್ಯ ನೀಡಲು ಸಹಕಾರಿ ಎಂದು ಕ್ರಡೈ ಬೆಂಗಳೂರು ಅಧ್ಯಕ್ಷ ಆಶಿಶ್ ತಿಳಿಸಿದ್ದಾರೆ.
ಇತರೆ ನಗರಗಳಿಗೆ ಹೋಲಿಸಿದರೆ ಇಲ್ಲಿನ ಬೆಲೆ ಸ್ಥಿರವಾಗಿರುವುದು ಇವರು ಮನೆ ಕೊಳ್ಳಲು ಆಸಕ್ತಿ ತೋರುತ್ತಿರುವುದಕ್ಕೆ ಕಾರಣ ಇರಬಹುದು. ನಾವು ಬೆಲೆಯನ್ನು ಹೆಚ್ಚು, ಕಡಿಮೆ ಹಗೂ ಸ್ಥಿರವಾಗಿ ಇಟ್ಟುಕೊಳ್ಳುವ ಅನುಕೂಲ ಹೊಂದಿದ್ದೇವೆ. ಒಟ್ಟಾರೆಯಾಗಿ ಒಂದು ವಲಯವಾಗಿ, ಅದರಲ್ಲೂ ಮುಖ್ಯವಾಗಿ ಈ ಪ್ರದರ್ಶನಕ್ಕಾಗಿ ನಾವು, ಬೆಲೆ ಏರಿಕೆ ವಿರುದ್ಧವಾಗಿ ನಿಲ್ಲಲು ನಿರ್ಧರಿಸಿದ್ದೇವೆ. ಆಸ್ತಿ ಖರೀದಿಸಲು ಇದು ಉತ್ತಮ ಸಮಯ ಎಂದರು.





