ಶಂಕರನಾರಾಯಣ: ಯುವತಿ ನಾಪತ್ತೆ
ಶಂಕರನಾರಾಯಣ, ಅ.4: ವಂಡಾರು ಗ್ರಾಮದ ಮಾರ್ವಿಗರ್ನಕೋಡಿಯ ರಾಮ ಕುಲಾಲ್ ಎಂಬವರ ಪುತ್ರಿ ಪವಿತ್ರ (20) ಎಂಬವರು ನಿನ್ನೆ ಅಪರಾಹ್ನ 3:30ರಿಂದ 5 ಗಂಟೆ ನಡುವಿನ ಅವಧಿಯಲ್ಲಿ ಮನೆಯಿಂದ ಯಾರಿಗೂ ಹೇಳದೇ ಹೊರಗೆ ಹೋದವಳು ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿದೆ.
ಆಕೆ ಹುಬ್ಬಳ್ಳಿ ಮೂಲದ ಶ್ರೀಕಾಂತ ಎಂಬಾತನೊಂದಿಗೆ ಹೋಗಿರುವ ಅನುಮಾನವಿದೆ ಎಂದು ಶಂಕರನಾರಾಯಣ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ.
Next Story





