ಅಪರಿಚಿತ ಮೃತ್ಯು: ವಾರಸುದಾರರಿಗೆ ಸೂಚನೆ
ಉಡುಪಿ, ಅ.4: ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಕುಂದಾಪುರ ಗಾಂಧಿ ಮೈದಾನದ ಬಯಲು ರಂಗ ಮಂದಿರದ ಜಗುಲಿಯಲ್ಲಿ ಸುಮಾರು 65ರಿಂದ 70 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ಶರೀರ ದೊರೆತಿದ್ದು, ಆಹಾರ ಹಾಗೂ ಚಿಕಿತ್ಸೆ ದೊರೆಯದೇ ತೀವ್ರ ಅಸ್ವಸ್ಥಗೊಂಡು ಮಲಗಿದ್ದಲ್ಲಿಯೆ ಮೃತ ಪಟ್ಟಿದ್ದಾಗಿ ತಿಳಿದುಬಂದಿದೆ.
ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್ ಉಡುಪಿ(0820-2526444) ಅಥವಾ ಪೊಲೀಸ್ ವೃತ್ತನಿರೀಕ್ಷಕರು, ಕುಂದಾಪುರ ವೃತ್ತ (08254-230880) ಅಥವಾ ಪೊಲೀಸ್ ಉಪ ನಿರೀಕ್ಷಕರು, ಕುಂದಾಪುರ ಪೊಲೀಸ್ ಠಾಣೆ (08254-230338)ಗೆ ಮಾಹಿತಿ ನೀಡುವಂತೆ ಕುಂದಾಪುರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
Next Story





