ಪರಿಶಿಷ್ಟ ಜಾತಿ, ಪಂಗಡಗಳ ಭಡ್ತಿ ಮೀಸಲಾತಿ ಕಾಯ್ದೆ: ಅ.12ರ ಬಳಿಕ ಸರಕಾರದ ಯತ್ನ; ಕೃಷ್ಣಭೈರೇಗೌಡ

ಬೆಂಗಳೂರು, ಅ.4: ಪರಿಶಿಷ್ಟ ಜಾತಿ, ಪಂಗಡಗಳ ಭಡ್ತಿ ಮೀಸಲಾತಿ ಕಾಯ್ದೆಯ ವಿಚಾರಣೆಯು ಅ.12ರಂದು ಸುಪ್ರೀಂಕೋರ್ಟ್‌ನಲ್ಲಿ ಮತ್ತೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಲ್ಲಿಯವರೆಗೆ ಕಾದು ನೋಡಲು ಸರಕಾರ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಈಗಾಗಲೆ ಒಂಭತ್ತು ಬಾರಿ ಈ ಸಂಬಂಧ ವಿಚಾರಣೆ ನಡೆದಿದೆ. ನ್ಯಾಯಾಲಯದ ಆದೇಶ ಹೊರಬೀಳುವವರೆಗೆ ಯಾವುದೇ ರೀತಿಯಲ್ಲಿ ಕಾಯ್ದೆ ಮಾಡದಂತೆ ನಮಗೆ ಮೌಖಿಕ ಸೂಚನೆ ನೀಡಲಾಗಿತ್ತು ಎಂದರು.
ಭಡ್ತಿ ಮೀಸಲಾತಿ ಕಾಯ್ದೆ ನಮ್ಮ ಬದ್ಧತೆ. ಅದರಿಂದ ಹಿಂದಕ್ಕೆ ಸರಿಯುವ ಪ್ರಶ್ನೆ ಇಲ್ಲ. ಆದರೂ, ನ್ಯಾಯಾಲಯಕ್ಕೆ ಗೌರವ ನೀಡಲು ಅ.12ರವರೆಗೆ ಕಾದು ನೋಡುತ್ತೇವೆ. ಅಲ್ಲದೆ, ವಿಚಾರಣೆ ಸಂದರ್ಭದಲ್ಲಿ ಕಾಯ್ದೆ ನಾವು ಸಿದ್ಧವಿರುವ ಅಂಶವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದರು.
Next Story





