ಉಡುಪಿ ತುಳುಕೂಟ: 17ನೇ ಕೆಮ್ತೂರು ತುಳು ನಾಟಕ ಸ್ಪರ್ಧೆಗೆ ತಂಡಗಳ ಆಹ್ವಾನ
ಉಡುಪಿ, ಅ.4: ತುಳು ರಂಗಭೂಮಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ದಿ. ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸಂಸ್ಮರಣೆಯಲ್ಲಿ ತುಳುಕೂಟ ಉಡುಪಿ ಆಯೋಜಿಸುತ್ತಿರುವ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ 17ನೇ ವರ್ಷದ ತುಳು ನಾಟಕ ಸ್ಪರ್ಧೆಗೆ ಆಸಕ್ತ ತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತುಳು ನಾಟಕ ಸ್ಪರ್ಧೆ ಡಿಸೆಂಬರ್ 22ರಿಂದ ಉಡುಪಿಯಲ್ಲಿ ನಡೆಯಲಿದೆ. ದೇಶದ ಯಾವುದೇ ಪ್ರದೇಶದಲ್ಲಿರುವ ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಗೆ ಗರಿಷ್ಠ ಏಳು ನಾಟಕ ಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.
ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ಕ್ರಮವಾಗಿ ರೂ.20,000, ರೂ.15,000 ಹಾಗೂ ರೂ.10,000 ನಗದು ಬಹುಮಾನ ನೀಡಲಾಗುತ್ತದೆ. ಅಲ್ಲದೇ ಉತ್ತಮ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಪ್ರಥಮ ರೂ. 1,000 ಮತ್ತು ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು. ಸ್ಪರ್ಧೆಗೆ ಆಯ್ಕೆ ಯಾದ ರಾಜ್ಯದೊಳಗಿನ ತಂಡಗಳಿಗೆ ರೂ.5,000 ಹಾಗೂ ಹೊರರಾಜ್ಯದ ತಂಡಗಳಿಗೆ ರೂ.10,000 ಭತ್ಯೆಯೊಂದಿಗೆ ಊ ಟೋಪಚಾರ ಒದಗಿಸಲಾಗುವುದು.
ನಾಟಕ ಸ್ಪರ್ಧೆಯಲ್ಲಿ ಬಾಗವಹಿಸಲಿಚ್ಛಿಸುವ ಕ್ರಿಯಾಶೀಲ ತುಳು ಹವ್ಯಾಸಿ ರಂಗತಂಡಗಳು ಮುದ್ರಿತ ಪ್ರವೇಶ ಪತ್ರ ಮತ್ತು ನಿಯಮಾವಳಿಗಳಿಗಾಗಿ ಬಿ.ಪ್ರಭಾಕರ ಭಂಡಾರಿ, ಕೆಮ್ತೂರು ನಾಟಕ ಸ್ಫರ್ಧೆಯ ಸಂಚಾಲಕರು ಪ್ರಕೃತಿ 5-94ಂ, 76ನೇ ಬಡಗುಬೆಟ್ಟು,ಬೈಲೂರು, ಉಡುಪಿ-576101 (ಮೊ:9880825626) ಇವರನ್ನು ಸಂಪರ್ಕಿಸಬಹುದು. ಪ್ರವೇಶ ಪತ್ರಗಳನ್ನು ಸ್ವೀಕರಿಸಲು ಅ.28 ಕೊನೆಯ ದಿನವಾಗಿದೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ವಿ.ಜಿ. ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







