ಸ್ಮಾರ್ಟ್ ಏಷ್ಯಾ ಎಕ್ಸ್‌ಪೊ 2ನೆ ಆವೃತ್ತಿ ಉದ್ಘಾಟಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಅ. 4: ಅಂತರ್‌ರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ತೈಪೆ ವರ್ಲ್ಡ್ ಟ್ರೇಡ್ ಸೆಂಟರ್ ಆಯೋಜಿಸಿರುವ ಸ್ಮಾರ್ಟ್ ಏಷ್ಯಾ ಎಕ್ಸ್‌ಪೊ ಶೃಂಗಸಭೆಯ ಪ್ರಸಕ್ತ ಸಾಲಿನ 2ನೆ ಆವೃತ್ತಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ಅಂತರ್‌ರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಉದ್ಘಾಟಿಸಿದರು.
ಸ್ಮಾರ್ಟ್ ಏಷ್ಯಾ ಎಕ್ಸ್‌ಪೊ 2ನೆ ಆವೃತ್ತಿಯ ಶೃಂಗಸಭೆಯಲ್ಲಿ ತೈವಾನಿನ ಮುಂಚೂಣಿ ಕಂಪನಿಗಳು ಮೂರು ದಿನಗಳ ಎಕ್ಸ್‌ಪೊದಲ್ಲಿ ಭಾಗವಹಿಸಿ ತಮ್ಮ ಪರಿಣಿತಿ ಮತ್ತು ಅಂತರ್‌ರಾಷ್ಟ್ರೀಯ ಪ್ರಾಜೆಕ್ಟ್‌ಗಳಿಗೆ ಸ್ಮಾರ್ಟ್ ಸಿಟಿ ಪರಿಕರಗಳನ್ನು ಪರಸ್ಪರ ಹಂಚಿಕೆ ಮಾಡಿಕೊಂಡಿದ್ದಾರೆ. ಅಲ್ಲದೆ, ಸ್ಮಾರ್ಟ್ ಸಿಟಿ, ಸ್ಮಾರ್ಟ್ ಸಾರಿಗೆ, ಸ್ಮಾರ್ಟ್ ಎನರ್ಜಿ, ಸ್ಮಾರ್ಟ್ ಹೆಲ್ತ್‌ಕೇರ್, ಇಂಟರ್‌ನೆಟ್ ಆಫ್ ಥಿಂಗ್ಸ್(ಐಒಟಿ) ಪರಿಕರಗಳು ಮತ್ತು ಸ್ಮಾರ್ಟ್-ಲೈಫ್ ಸಾಧನಗಳ ಉದ್ಯಮಗಳು ಎಕ್ಸ್‌ಪೊದಲ್ಲಿ ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ತೈಪೆ ವರ್ಲ್ಡ್ ಟ್ರೇಡ್ ಸೆಂಟರ್ ಅಧ್ಯಕ್ಷ ಜೇಮ್ಸ್ ಸಿ.ಎಫ್.ಹಾಂಗ್, ಕರ್ನಾಟಕ ರಾಜ್ಯ ಕೌನ್ಸಿಲ್ ಅಧ್ಯಕ್ಷ ಶೇಖರ್ ವಿಶ್ವನಾಥನ್ ಮತ್ತು ಯು.ಡಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಪಾಲ್ಗೊಂಡಿದ್ದರು.





