ದೇವರು, ಧರ್ಮದ ಕುರಿತ ಇವರ ಪತ್ರದ ಮೌಲ್ಯ 11 ಕೋಟಿ ರೂ!

ನ್ಯೂಯಾರ್ಕ್, ಅ. 4: ದೇವರು ಮತ್ತು ಧರ್ಮದ ಕುರಿತ ಅವರ ಕಲ್ಪನೆಗಳ ಬಗ್ಗೆ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಕೈಯಿಂದ ಬರೆದ ಪತ್ರವೊಂದು ನ್ಯೂಯಾರ್ಕ್‌ನಲ್ಲಿ ಹರಾಜಾಗಲಿದೆ ಎಂದು ಹರಾಜು ಸಂಸ್ಥೆ ‘ಕ್ರಿಸ್ಟೀಸ್’ ಬುಧವಾರ ತಿಳಿಸಿದೆ.
ಪತ್ರದ ಮೌಲ್ಯವನ್ನು 1.5 ಮಿಲಿಯ ಡಾಲರ್ (ಸುಮಾರು 11 ಕೋಟಿ ರೂಪಾಯಿ) ಎಂಬುದಾಗಿ ಅಂದಾಜಿಸಲಾಗಿದೆ.
1955ರಲ್ಲಿ ನಿಧನರಾಗುವುದಕ್ಕೆ ಒಂದು ವರ್ಷ ಮುಂಚೆ ಅವರು ಈ ಪತ್ರ ಬರೆದಿದ್ದರು.
ಜರ್ಮನಿ ಭಾಷೆಯಲ್ಲಿರುವ ಈ ಪತ್ರವನ್ನು ಅವರು ಅಮೆರಿಕದ ನ್ಯೂಜರ್ಸಿ ರಾಜ್ಯದ ಪ್ರಿನ್ಸ್‌ಟನ್‌ನಿಂದ ಜರ್ಮನ್ ತತ್ವಜ್ಞಾನಿ ಎರಿಕ್ ಗುಟ್ಕಿಂಡ್‌ಗೆ ಬರೆದಿದ್ದರು.
ಒಂದೂವರೆ ಪುಟದ ಪತ್ರವು ಡಿಸೆಂಬರ್ 4ರಂದು ಹರಾಜಾಗಲಿದೆ.
Next Story





