ಮಂಡ್ಯ: ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ

ಮಂಡ್ಯ, ಅ.4: ಬೈಕ್ ಢಿಕ್ಕಿಯಾಗಿ ಮತ್ತೊಂದು ಬೈಕ್‍ನ ಸವಾರ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಗೆಜ್ಜಲಗೆಗೆ ಬಳಿ ಗುರುವಾರ ಬೆಳಗ್ಗೆ ನಡೆದಿದೆ.
ತಾಲೂಕಿನ ಕೆ.ಹೊನ್ನಲಗೆರೆಯ ಲಿಂಗೇಗೌಡರ ಪುತ್ರ ರಾಜಣ್ಣ(70) ಸಾವನ್ನಪ್ಪಿದವರು. ಇವರು ಗ್ರಾಮದಿಂದ ಬೈಕ್‍ನಲ್ಲಿ ಮೆಣಸಿನಕಾಯಿ ತೆಗೆದುಕೊಂಡು ಮಂಡ್ಯ ಮಾರುಕಟ್ಟೆಗೆ ಬರುತ್ತಿದ್ದರು.
ಹಿಂದಿನಿಂದ ಬಂದ ಬೈಕ್ ಢಿಕ್ಕಿಯೊಡೆದು ಈ ಘಟನೆ ಸಂಭವಿಸಿದ್ದು, ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





