ಟೆಕ್ವಾಂಡೊ ಚಾಂಪಿಯನ್ ಶಿಪ್: ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಪದಕ

ಮಡಿಕೇರಿ ಅ.4 : ಬೆಂಗಳೂರಿನ ಮ್ಯಾನ್‍ಪೊ ಕನ್‍ವೆನ್ಷನ್ ಸೆಂಟರ್ ನಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಸಬ್ ಜೂನಿಯರ್, ಕೆಡೆಟ್, ಜೂನಿಯರ್ ಹಾಗೂ ಸೀನಿಯರ್ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು 8 ಚಿನ್ನ, 6 ಬೆಳ್ಳಿ ಹಾಗೂ 4 ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ತರಬೇತುದಾರ ಬಿ.ಜಿ. ಲೋಕೇಶ್ ರೈ ತಿಳಿಸಿದ್ದಾರೆ.
ಕೊಡಗಿನ ಬಿ.ಎಸ್.ದೃತಿ ರಿಷಿಕಾ 2 ಚಿನ್ನ, ಅನುಷ್ಕ ಎನ್.ನಾಯಾಯಣ್ 1 ಚಿನ್ನ ಹಾಗೂ 1 ಬೆಳ್ಳಿ, ತೆನ್ನೀರ ಶಾನ್ ಪೊನ್ನಪ್ಪ 1 ಚಿನ್ನ, ಜೀವನ್ ಮುತ್ತುಕುಮಾರ್ 1 ಚಿನ್ನ, ಚಂಡೀರ ಮೌರ್ಯ ಸುಧಾಕರ್ 1 ಚಿನ್ನ, ಸ್ಟಾಲಿನ್ ಎಫ್. ಪ್ರಾನ್ಸಿಸ್ 1 ಚಿನ್ನ, ಪವಿನ್ ಚಂಗಪ್ಪ 1 ಚಿನ್ನ ತಮ್ಮದಾಗಿಸಿಕೊಂಡಿದ್ದಾರೆ.
ಪೂರ್ವಿತ್ ಎಮ್. ವೆಂಕಪ್ಪ 1 ಬೆಳ್ಳಿ, ದರ್ಶನ್ ಬಿ. ಪ್ರಸಾದ್ 1 ಬೆಳ್ಳಿ, ಚಿನ್ಮಯ್ ಭಟ್ ಎಮ್. ಪದ್ಮನಾಭ 1 ಬೆಳ್ಳಿ, ದೇವಿಶ್ರೀ ಬಿ. ಪ್ರಭಾಕರ್ 1 ಬೆಳ್ಳಿ, ವರುಣ್ ಎನ್ ನಾರಾಯಣ್ 1 ಬೆಳ್ಳಿ, ಗೀತಾ ಮಂಜುನಾಥ್ 2 ಕಂಚು ಹಾಗೂ ಎಮ್. ಐಚಂಡ ತನೀಶ್ ತಮ್ಮಯ್ಯ 1 ಕಂಚು, ಇಶಾನ್ ಹೇಮಂತ್ 1 ಕಂಚನ್ನು ಪಡೆದುಕೊಂಡಿದ್ದಾರೆ.
ಕರ್ನಾಟಕ ಟೆಕ್ವಾಂಡೊ ಸಂಸ್ಥೆಯ ಮಾರ್ಗದರ್ಶನದಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದ ಸುಮಾರು ಎಂಟು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.







