ತ್ರಿಪುರಾದಲ್ಲಿ ಎನ್‌ಆರ್‌ಸಿ ಜಾರಿಯ ಉದ್ದೇಶವಿಲ್ಲ: ಕೇಂದ್ರ
ಹೊಸದಿಲ್ಲಿ,ಅ.5: ತ್ರಿಪುರಾದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಯನ್ನು ಅನುಷ್ಠಾನಿಸುವ ಯಾವುದೇ ಉದ್ದೇಶವನ್ನು ತಾನು ಹೊಂದಿಲ್ಲ ಎಂದು ಕೇಂದ್ರ ಸರಕಾರವು ಶುಕ್ರವಾರ ಸ್ಪಷ್ಟಪಡಿಸಿದೆ.
ತ್ರಿಪುರಾದ ಐಎನ್‌ಪಿಟಿ ಪಕ್ಷದ ನಿಯೋಗವೊಂದು ಗುರುವಾರ ತನ್ನ ಅಧ್ಯಕ್ಷ ಬಿಜಯ್ ಕುಮಾರ ಹರಂಗಖಾವ್ಲ್ ಅವರ ನೇತೃತ್ವದಲ್ಲಿ ಗೃಹಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿದ್ದು,ರಾಜ್ಯದಲ್ಲಿ ಎನ್‌ಆರ್‌ಸಿ ಅನುಷ್ಠಾನದ ಬಗ್ಗೆ ಯಾವುದೇ ಭರವಸೆಯನ್ನು ನಿಯೋಗಕ್ಕೆ ನೀಡಲಾಗಿಲ್ಲ. ಆ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಗೃಹಸಚಿವಾಲಯದ ಹೇಳಿಕೆಯು ತಿಳಿಸಿದೆ.
ನಿಯೋಗದ ಭೇಟಿಯ ಬಳಿಕ ತ್ರಿಪುರಾದಲ್ಲಿ ಎನ್‌ಆರ್‌ಸಿ ಜಾರಿ ಸಾಧ್ಯತೆ ಕುರಿತು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರುವ ವರದಿಗಳು ಸಂಪೂರ್ಣವಾಗಿ ತಪ್ಪು ಮತ್ತು ಕುಚೇಷ್ಟೆಯಿಂದ ಕೂಡಿವೆ ಎಂದೂ ಗೃಹ ಸಚಿವಾಲಯವು ಹೇಳಿದೆ.
Next Story





