ದ.ರಾ.ಬೇಂದ್ರೆ ಕವನ ಸ್ಪರ್ಧೆಗೆ ಆಹ್ವಾನ
ಬೆಂಗಳೂರು, ಅ.5: ನಗರದ ದ.ರಾ.ಬೇಂದ್ರೆ ಕಾವ್ಯ ಕೂಟದ ವತಿಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ದ.ರಾ.ಬೇಂದ್ರೆ ಸ್ಮತಿ ಕವನ ರಚನಾ ಸ್ಪರ್ಧೆ ನಡೆಸಲಾಗುತ್ತಿದೆ.
ರಾಜ್ಯದ ಯಾವುದೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ದ.ರಾ.ಬೇಂದ್ರೆ ಸ್ಕೃತಿ ಕವನ ರಚನಾ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ನವೆಂಬರ್ 20ರೊಳಗೆ ಕವನವನ್ನು ಡಾ.ಜಿ.ಕೃಷ್ಣಪ್ಪ, ಅಧ್ಯಕ್ಷರು ದ.ರಾ.ಬೇಂದ್ರೆ ಕಾವ್ಯ ಕೂಟ ನಂ.22, ಗುರುದತ್ತ ನಿಲಯ, 1ನೆ ಅಡ್ಡರಸ್ತೆ, ನೇತಾಜಿ ನಗರ, ಮತ್ತಿಕೆರೆ ಬೆಂ.560054ಕ್ಕೆ ಕಳುಹಿಸಬಹುದು. ಕವನವನ್ನು ಕಾಗದದ ಒಂದೇ ಮಗ್ಗುಲಲ್ಲಿ ಸ್ಪಷ್ಟವಾಗಿ ಬರೆದಿರಬೇಕು. ಕವನದ ಒಂದು ಪ್ರತಿಯನ್ನು ಇಟ್ಟುಕೊಂಡು ಸ್ಪರ್ಧೆಗೆ ಕಳಿಸಬೇಕು.
ಪ್ರಥಮ ಬಹುಮಾನ 3,000 ರೂ., ಎರಡನೆ ಬಹುಮಾನ 2,500 ರೂ. ಹಾಗೂ ಮೂರನೆ ಬಹುಮಾನ 2,000 ರೂ.ಆಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ.99721-09209ಕ್ಕೆ ಸಂಪರ್ಕಿಸಲು ಕೋರಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





