ಲೇಖಕ ರಾ.ನಂ.ಚಂದ್ರಶೇಖರ್ ಗೆ ‘ಅರವಿಂದ ಜೋಶಿ' ಪ್ರಶಸ್ತಿ

ಬೆಳಗಾವಿ, ಅ.5: ಹಿರಿಯ ಕನ್ನಡ ಹೋರಾಟಗಾರ ಮತ್ತು ಲೇಖಕ ರಾ.ನಂ.ಚಂದ್ರಶೇಖರ ಅವರು ಬೆಳಗಾವಿಯ ನಾಡೋಜ ಪ್ರತಿಷ್ಠಾನವು ನೀಡುವ ಪ್ರತಿಷ್ಠಿತ ‘ಅರವಿಂದ ಜೋಶಿ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ.
ಬೆಳಗಾವಿಯು ಕರ್ನಾಟಕದಲ್ಲಿ ಉಳಿಯಲು ಮೂಲ ಕಾರಣಕರ್ತರಾದ ಅರವಿಂದ ಜೋಶಿ ಅವರ ನೆನಪಿನಲ್ಲಿ ನೀಡುವ ಪ್ರಶಸ್ತಿಯು 5 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಉಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ.9 ರಂದು ಬೆಳಗಾವಿಯಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
1980-90ರ ದಶಕದಲ್ಲಿ ಕನ್ನಡ ಶಕ್ತಿ ಕೇಂದ್ರವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾ.ನಂ.ಚಂದ್ರಶೇಖರ ಕರ್ನಾಟಕ ಮತ್ತು ಕನ್ನಡಪರ ವಿಚಾರ ಹಾಗೂ ಸಮಸ್ಯೆಗಳನ್ನು ಕುರಿತು 25ಕ್ಕೂ ಅಧಿಕ ಕೃತಿಗಳನ್ನು ಬರೆದಿದ್ದಾರೆ. ಅವರ ಈ ಮೌಲಿಕ ಸೇವೆಯನ್ನು ಪರಿಗಣಿಸಿ, ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನ ತಿಳಿಸಿದೆ.
Next Story





