ಬೆಂಗಳೂರು: ಕೀನ್ಯಾ ಪ್ರಜೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಬೆಂಗಳೂರು, ಅ. 5: ಮೆಟಬೊಲಿಕ್ ಸಿಂಡ್ರೋಮ್, ಒಬೆಸಿಟಿ, ಮಧುಮೇಹ ಮತ್ತು ಅತಿಯಾದ ಟ್ರೈಗ್ಲಿಸರೈಡ್‌ನಿಂದ ಬಳಲುತ್ತಿದ್ದ ನೂರು ಕೆಜಿ ತೂಕದ ಕೀನ್ಯಾ ದೇಶದ 51 ವರ್ಷದ ಸುಲೈಮಾನ್ ಎಂಬವರಿಗೆ ಬೆಂಗಳೂರಿನ ಗ್ಲೆನೀಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆ ತಜ್ಞ ವೈದ್ಯ ಡಾ.ಜಿ.ಮೊಯಿದ್ದೀನ್, ‘ಸಿಂಗಲ್ ಇನ್‌ಸಿಷನ್ ಸ್ಲೀವ್ ಗ್ಯಾಸ್ಟ್ರೆಕ್ಟು ಒಂದು ಕ್ಷಿಪ್ರಗತಿಯ ಶಸ್ತ್ರಚಿಕಿತ್ಸೆ. ಇದು ಬ್ಯಾರಿಯಾಟ್ರಿಕ್ಸ್‌ನಲ್ಲಿ ನಡೆಸುವ ಅತ್ಯುತ್ತಮವಾದ ಶಸ್ತ್ರಚಿಕಿತ್ಸೆಯ ತಾಂತ್ರಿಕ ಕ್ರಮ ಎಂದರು
ಹೆಚ್ಚಿನ ತೂಕ ಹೊಂದಿರುವ ಶಸ್ತ್ರ ಚಿಕಿತ್ಸೆಗೆ ಒಳಗಾದ ಸುಲೈಮಾನ್ ಮೊದಲ ವರ್ಷದಲ್ಲಿ 25 ಕೆಜಿಯಷ್ಟು ತೂಕ ಇಳಿಕೆಯಾಗುವ ನಿರೀಕ್ಷೆ ಇದೆ. ಆದರೆ, ಆಹಾರ ಪದ್ಧತಿ ಮತ್ತು ವ್ಯಾಯಾಮಗಳನ್ನು ರೂಢಿಸಿಕೊಳ್ಳುವ ಮೂಲಕ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ ಎಂದು ಅವರು ಸೂಚಿಸಿದರು.
ನಮ್ಮ ಆಸ್ಪತ್ರೆಯಲ್ಲಿ ಕತಾರ್, ಜೆಡ್ಡಾ, ರಿಯಾದ್, ದುಬೈ, ಕುವೈತ್, ನೈಜೀರಿಯಾ, ಇರಾಕ್ ಮತ್ತು ಕೆನಡಾದಂತಹ ದೇಶಗಳ 15ಕ್ಕೂ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಈ ರೋಗಿಗಳು ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿವಿಧ ರೀತಿಯ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು







