ಮೈಸೂರು: ಜಾಗದ ವಿಚಾರಕ್ಕೆ ನಾದಿನಿಯನ್ನೇ ಹತ್ಯೆಗೈದ ಬಾವ

ಮೈಸೂರು,ಅ.5: ಜಾಗದ ವಿಚಾರದಲ್ಲಿ ಗಲಾಟೆ ನಡೆದು ನಾದಿನಿಯನ್ನೇ ಬಾವ ಹತ್ಯೆಗೈದ ಘಟನೆ ಮೈಸೂರು ತಾಲೂಕಿನ ಕಡಕೊಳ ಬಳಿ ನಡೆದಿದೆ.
ಬಾವ ಬವರಲಾಲ್ ಎಂಬಾತ ನಾದಿನಿ ಕಾಂಚನಾ (34) ಎಂಬವರನ್ನು ಹತ್ಯೆ ಮಾಡಿದ್ದಾರೆ. ಜಾಗದ ವಿಚಾರದಲ್ಲಿ ಗಲಾಟೆ ನಡೆಯುವಾಗ ದೊಣ್ಣೆಯಿಂದ ಕಾಂಚನಾ ತಲೆಗೆ ಬವರಲಾಲ್ ಹೊಡೆದಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದ ಕಾಂಚನಾಳನ್ನು ಆಕೆಯ ಪತಿ ದೇವರಲಾಲ್ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ಕಾಂಚನಾ ಸಾವನ್ನಪ್ಪಿದ್ದು, ಕೆ.ಆರ್ ಆಸ್ಪತ್ರೆಯ ಶವಾಗಾರದಲ್ಲಿ ಕಾಂಚನಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





