ಬೆಂಗಳೂರು: ದಾಂಧಲೆ ಮಾಡಿ ಪರಾರಿಯಾಗಿದ್ದ 8 ರೌಡಿಗಳ ಸೆರೆ
ಬೆಂಗಳೂರು, ಅ.5: ದಾಂಧಲೆ ಮಾಡಿ ಪರಾರಿಯಾಗಿದ್ದ ಆರೋಪ ಪ್ರಕರಣ ಸಂಬಂಧ 8 ರೌಡಿಗಳನ್ನು ವಯ್ಯಲಿಕಾವಲ್ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಗುರುವಾರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ವಯ್ಯಿಲಿಕಾವಲ್ ಕೋದಂಡರಾಮಪುರದ 12ನೆ ಕ್ರಾಸ್‌ನಲ್ಲಿ ಈ ರೌಡಿಗಳು ಲಾಂಗ್, ಮಚ್ಚು ಹಿಡಿದು ರಸ್ತೆಯಲ್ಲಿ ಸಾರ್ವಜನಿಕರನ್ನು ಬೆದರಿಸಿದ್ದರು ಎನ್ನಲಾಗಿದೆ.
ಬೇಕರಿಯ ಗ್ಲಾಸ್ ಒಡೆದು ದಾಂಧಲೆ ಮಾಡಿ ಪರಾರಿಯಾಗಿದ್ದರು. ಸುದ್ದಿ ತಿಳಿದ ವಯ್ಯಾಲಿಕಾವಲ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 8 ಮಂದಿ ರೌಡಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story





