ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಣೆ: ಕೇಂದ್ರ, ಯುಐಡಿಎಐ ಪ್ರತಿಕ್ರಿಯೆ ಕೋರಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ, ಅ. 5: ಮತದಾರರ ಪಟ್ಟಿ ಹಾಗೂ ಮತದಾರರ ಗುರುತು ಚೀಟಿಗೆ ಆಧಾರ್ ಜೋಡಿಸುವಂತೆ ಕೋರಿ ಸಲ್ಲಿಸಲಾದ ಮನವಿಯ ಹಿನ್ನೆಲೆಯಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯ ಶುಕ್ರವಾರ ಯುಐಡಿಎಐ ಹಾಗೂ ಬಿಜೆಪಿಗೆ ನೋಟಿಸು ಜಾರಿ ಮಾಡಿದೆ.
ಮುಂದಿನ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಸೂಚಿಸಿರುವ ನ್ಯಾಯಮೂರ್ತಿ ನೇತ್ರತ್ವದ ಕೇಂದ್ರ ಸರಕಾರಕ್ಕೆ ಪಿ.ಟಿ. ಆಶಾ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ನಿಗದಿಪಡಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿರುವ ದೇಸಿಯ ಮಕ್ಕಳ್ ಶಕ್ತಿ ಕಚ್ಚಿ ಸಂಘಟನೆಯ ಅಧ್ಯಕ್ಷ ಎಂ.ಎಲ್. ರವಿ, ಇದರಿಂದ ಚುನಾವಣೆ ಭ್ರಷ್ಟಾಚಾರ ಕಡಿಮೆಯಾಗಬಹುದು ಎಂದಿದ್ದಾರೆ.
ಈ ಶಿಫಾರಸಿನ ಬಗ್ಗೆ ಚುನಾವಣಾ ಆಯೋಗಕ್ಕೆ ಯಾವುದೇ ಆಕ್ಷೇಪ ಇಲ್ಲ. ಆದರೆ, ಇದನ್ನು ಬಯೋಮೆಟ್ರಿಕ್ ಗುರುತು ವ್ಯವಸ್ಥೆಯ ಕುರಿತು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಪರಿಗಣಿಸಲಾಗಿದೆ ಎಂದು ಭಾರತದ ಚುನಾವಣಾ ಆಯೋಗದ ಕಾನೂನು ತಜ್ಞ ನಿರಂಜನ್ ರಾಜಗೋಪಾಲನ್ ತಿಳಿಸಿದ್ದಾರೆ.
Next Story





