ಸರಕಾರಿ ಯೋಜನೆ ಅನುಷ್ಠಾನದ ಬಗ್ಗೆ ಐವನ್ ಪರಾಮರ್ಶೆ
ಮಂಗಳೂರು, ಅ. 6: ಮಂಗಳೂರು ಧರ್ಮಪ್ರಾಂತದ ವಿವಿಧ ಚರ್ಚುಗಳಿಗೆ ಭೇಟಿ ನೀಡಿ ಅಲ್ಪಸಂಖ್ಯಾತರಿಗೆ ದೊರಕುವ ಯೋಜನೆ ಅನುಷ್ಠಾನ ಮತ್ತು ವೈಫಲ್ಯದ ಬಗ್ಗೆ ಯೋಜನೆಗಳ ನಿಯಮಗಳಲ್ಲಿ ಸರಳೀಕರಣಗೊಳಿಸುವ ಕುರಿತು ಮಂಗಳೂರು ಧರ್ಮಪ್ರಾಂತದ ಪ್ರಮುಖ ಚರ್ಚುಗಳಾದ ಬೋಂದೆಲ್,ಬಜ್ಪೆ ಪೆರ್ಮುದೆ, ಕಟೀಲು, ನಿಡ್ಡೋಡಿ, ಸಂಪಿಗೆ, ಸವೆರಪುರ,ಪಾಲಡ್ಕ, ಬೆಳುವಾಯಿ, ಅಲಂಗಾರು, ತಾಕೊಡೆ, ಹೊಸಬೆಟ್ಟು, ಮೂಡುಬಿದಿರೆ, ಗಂಟಲ್‌ಕಟ್ಟೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಭೇಟಿ ನೀಡಿ ಪರಾಮರ್ಶೆ ನಡೆಸಿದರು.
ಚರ್ಚ್ ಮುಖ್ಯಸ್ಥರ ಸಲಹೆ ಸೂಚನೆ ಪಡೆದು ಯೋಜನೆಯ ಅನುಷ್ಠಾನಗಳಲ್ಲಿ ಆಗುವ ವಿಳಂಬವನ್ನು ತಡೆಯಲು ಕೈಗೊಳ್ಳಲಾಗುವ ಕ್ರಮ ಮತ್ತು ನೀಡಿದ ಅನುದಾನ ಅನುಷ್ಠಾನವಾಗಿದೆಯೇ? ಎಂದು ತಿಳಿಯುವ ಪ್ರಯತ್ನ ನಡೆಸಿದರು.
ಈ ಸಂದರ್ಭ ಬೆಳಗಾವಿ ಅಧಿವೇಶನದಲ್ಲಿ ಕ್ರೈಸ್ತ ಸಮುದಾಯಕ್ಕೆ ಅವಶ್ಯವಿರುವ ಯೋಜನೆಗಳ ಬಗ್ಗೆ ಕಲ್ಯಾಣ ಸಮಿತಿಗೆ ಶಿಫಾರಸು ಮಾಡುವ ಕುರಿತು ಸಮುದಾಯದ ವಿವಿಧ ನಾಯಕರಿಂದ ಐವನ್ ಡಿಸೋಜ ಅಭಿಪ್ರಾಯ ಪಡೆದರು.
Next Story





