ಕಾಂಗ್ರೆಸ್ ಮುಖಂಡ ಸೆಯ್ಯದ್ ಯೂಸುಫ್ ನಿಧನ
ಬೆಂಗಳೂರು, ಅ. 6: ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಸೈಯದ್ ಯೂಸುಫ್ (58) ಅವರು ಕಳೆದ ಕೆಲ ದಿನಗಳ ಅಸ್ವಸ್ಥತೆ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ಶನಿವಾರ ಬೆಳಗಿನಜಾವ ನಿಧನ ಹೊಂದಿದ್ದಾರೆ.
ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಸಹಿತ ಅಪಾರ ಬಂಧು-ಮಿತ್ರರು ಹಾಗೂ ಕಾರ್ಯಕರ್ತರನ್ನು ಅವರು ಅಗಲಿದ್ದಾರೆ. ಇಲ್ಲಿನ ಜೆ.ಸಿ.ನಗರದ ನಿವಾಸಿಯಾಗಿದ್ದ ಶ್ರೀಯುತರು ಶಿವಾಜಿನಗರದಲ್ಲಿ ಬಡವರಿಗಾಗಿ ಲೈಫ್ ಲೈನ್ ಹೆಲ್ತ್ ಸೆಂಟರ್ ಅನ್ನು ನಡೆಸುತ್ತಿದ್ದರು ಎಂದು ಗೊತ್ತಾಗಿದೆ.
ಶನಿವಾರ ಖಾದ್ರಿಯಾ ಮಸೀದಿಯಲ್ಲಿ ಜನಾಝ ನಮಾಝ್ ಮತ್ತು ಖುದ್ದೂಸ್ ಸಾಬ್ ಖಬರಸ್ಥಾನದಲ್ಲಿ ದಫನ್ ಮಾಡಲಾಯಿತು. ಶ್ರಿಯುತರ ನಿಧನಕ್ಕೆ ರಾಜ್ಯಸಭಾ ಸದಸ್ಯರಾದ ಡಾ.ಎಲ್.ಹನುಮಂತಯ್ಯ, ಸೈಯದ್ ನಸಿರ್ ಹುಸೇನ್, ಸಚಿವ ಝಮೀರ್ ಅಹ್ಮದ್ ಖಾನ್, ಶಾಸಕರಾದ ರೋಷನ್ ಬೇಗ್, ನಸೀರ್ ಅಹ್ಮದ್, ಬಿ.ಎಂ.ಫಾರೂಕ್, ಮಾಜಿ ಶಾಸಕ ಝುಲ್ಫಿಕರ್ ಹಶ್ಮಿ, ಸೆಯ್ಯದ್ ಝಮೀರ್ ಪಾಷಾ, ಇಬ್ರಾಹೀಂ ಜೋಕಟ್ಟೆ ಸಹಿತ ಹಲವರು ಸಂತಾಪ ಸೂಚಿಸಿದ್ದಾರೆ.
Next Story





