ಬೆಂಗಳೂರು: ಕಳವು ಆರೋಪಿ ಬಂಧನ

ಬೆಂಗಳೂರು, ಅ.6: ಸರಗಳ್ಳತನ, ಚಿನ್ನಾಭರಣ ಕಳವು ಆರೋಪದಡಿ ಜೆ.ಬಿ.ನಗರ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಡೇವಿಡ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬೆಂಗಳೂರಿನಲ್ಲಿ ಕಳವು ಮಾಡಿಕೊಂಡು ತನ್ನ ಊರಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಈತನ ಮೇಲೆ ಜೆ.ಬಿ ನಗರ ಹಾಗೂ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನದ ಪ್ರಕರಣ ದಾಖಲಾಗಿದ್ದವು. ಬಂಧಿತನಿಂದ 525ಗ್ರಾಂ ತೂಕದ ಚಿನ್ನಾಭರಣ, ಟಿವಿ ಸೇರಿ ಸುಮಾರು 16ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





