ಮಂಡ್ಯ: ಕಾಲುಜಾರಿ ನದಿಗೆ ಬಿದ್ದು ವಿದ್ಯಾರ್ಥಿ ಸಾವು

ಮಂಡ್ಯ,ಅ.6: ಶ್ರೀರಂಗಪಟ್ಟಣ ತಾಲೂಕು ಮಂಡ್ಯಕೊಪ್ಪಲು ಬೋರೆದೇವರ ದೇವಸ್ಥಾನದ ಬಳಿ ಕಾವೇರಿ ನದಿಗೆ ಜಾರಿಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಅರವಟ್ಟಿಗೆಕೊಪ್ಪಲು ಗ್ರಾಮದ ಸಿದ್ದರಾಜು ಎಂಬುವವರ ಪುತ್ರ ನಿಖಿಲ್(16) ಮೃತಪಟ್ಟವರು. ಅರಕೆರೆ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ನಿಖಿಲ್ ಶಾಲೆ ಮುಗಿಸಿ ತನ್ನ ನಾಲ್ವರು ಸ್ನೇಹಿತರ ಜತೆ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಎನ್ನಲಾಗಿದೆ.
ಕಾವೇರಿ ನದಿಯ ಕಲ್ಲುಬಂಡೆ ಮೇಲೆ ನಿಂತಿದ್ದ ನಿಖಿಲ್ ಆಕಸ್ಮಿಕವಾಗಿ ಕಾಲುಜಾರಿಬಿದ್ದು ಮೃತಪಟ್ಟಿದ್ದು, ಸ್ಥಳೀಯರ ಸಹಾಯದಿಂದ ಶವವನ್ನು ನೀರಿನಿಂದ ಹೊರ ತೆಗೆಯಲಾಯಿತು ಎಂದು ಅರಕೆರೆ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.
Next Story





