ಗುಜರಾತ್: ಮಾನವ ಹಕ್ಕು ಹೋರಾಟಗಾರ ಗಿರೀಶ್ ಪಟೇಲ್ ನಿಧನ

ಅಹ್ಮದಾಬಾದ್, ಅ. 6: ಖ್ಯಾತ ಮಾನವ ಹಕ್ಕು ಹೋರಾಟಗಾರ ಹಾಗೂ ವಕೀಲ ಗಿರೀಶ್ ಪಟೇಲ್ ಅವರು ದೀರ್ಘ ಕಾಲದ ಅಸೌಖ್ಯದ ಬಳಿಕ ಶನಿವಾರ ಇಲ್ಲಿನ ತನ್ನ ನಿವಾಸದಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಗಿರೀಶ್ ಪಟೇಲ್ ಅವರು ಶನಿವಾರ ಮುಂಜಾನೆ 4 ಗಂಟೆಗೆ ನಿಧನರಾದರು. ವೃದ್ಧಾಪ್ಯದ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಇತ್ತೀಚೆಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ವೃತ್ತಿ ಆರಂಭಿಸುವ ಮುನ್ನ ಕಾನೂನು ಕಾಲೇಜಿನಲ್ಲಿ ಬೋಧಕರಾಗಿದ್ದರು. ಬಡವರು, ದಲಿತರು ಹಾಗೂ ಕಾರ್ಮಿಕರು ಸಮಸ್ಯೆಗಳ ಬಗ್ಗೆ ಅವರು ನೂರಾರು ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ಸಲ್ಲಿಸಿದ್ದರು.
Next Story





