ಆಕ್ರೋಶಿತರಾದ ಡೆಪ್ಯುಟಿ ಸ್ಪೀಕರ್ ಲೋಬೊ: ಗೋವಾ ಬಿಜೆಪಿ ಅಸಮಾಧಾನ
ಪಣಜಿ, ಅ. 6: ರಾಜ್ಯ ವಿಧಾನ ಸಭೆಯ ಹಿರಿಯ ನಾಯಕ ಹಾಗೂ ಉಪ ಸ್ಪೀಕರ್ ಮೈಕಲ್ ಲೋಬೊ ಅವರು ಆಕ್ರೋಶಿತರಾಗಿರುವ ಬಗ್ಗೆ ಗೋವಾ ಬಿಜೆಪಿ ಶನಿವಾರ ಅಸಮಾಧಾನ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಮನೋಹರ್ ಪಾರಿಕ್ಕಾರ್ ಅವರು ಗೈರು ಹಾಜರಾಗಿರುವುದರಿಂದ ರಾಜ್ಯದ ಆಡಳಿತ ಸಂಪೂರ್ಣ ಕುಸಿಯುತ್ತಿದೆ. ಅವರು ಶೀಘ್ರ ಗುಣಮುಖರಾಗುವಂತೆ ಜನರು ಪ್ರಾರ್ಥಿಸುತ್ತಿದ್ದಾರೆ ಎಂದು ಅದು ಹೇಳಿದೆ. ಪೇಂಕ್ರಿಯಾಸ್ ಕಾಯಿಲೆ ಹಿನ್ನೆಲೆಯಲ್ಲಿ ಪಾರಿಕ್ಕಾರ್ ಅವರನ್ನು ದಿಲ್ಲಿಯಲ್ಲಿರುವ ಎಐಐಎಂಎಸ್‌ನಲ್ಲಿ ಸೆಪ್ಟಂಬರ್ 15ರಂದು ದಾಖಲಿಸಲಾಗಿದೆ. ಸರಕಾರ ತಮಗೆ ಉದ್ಯೋಗ ಅವಕಾಶ ನೀಡುತ್ತದೆ ಎಂದು ಗೋವಾದ ಅರ್ಹ ಯುವಕರು ಕಾಯುತ್ತಿದ್ದಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಯಾವುದೇ ಉದ್ಯೋಗ ಸೃಷ್ಟಿಸಿಲ್ಲ.
ಪಕ್ಷದ ವಿರುದ್ಧದ ಇಂತಹ ಹೇಳಿಕೆಯೊಂದಿಗೆ ಲೋಬೋ ಸಾರ್ವಜನಿಕರ ಮುಂದೆ ಹೋಗಿಲ್ಲ. ಅವರು ನಮ್ಮ ಪಕ್ಷದ ಶಿಸ್ತಿನ ನಾಯಕ. ನಮ್ಮಿಂದ ಏನಾದರೂ ಅನ್ಯಾಯವಾಗಿದೆ ಎಂದು ಅವರು ಭಾವಿಸಿದರೆ, ಅವರು ನಮ್ಮಾಂದಿಗೆ ಮಾತನಾಡಬಹುದು ಎಂದು ಗೋವಾದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ತನವಾಡೆ ತಿಳಿಸಿದ್ದಾರೆ. ಎರಡು ವರ್ಷಗಳ ಕಾಲ ಶಾಸಕರಾಗಿರುವುದರೊಂದಿಗೆ ಲೋಬೋ ಅವರು ಕಳೆದ 11 ವರ್ಷಗಳು ಬಿಜೆಪಿಯೊಂದಿಗೆ ಇದ್ದಾರೆ ಎಂದು ಅವರು ಹೇಳಿದರು.







