2019 ಲೋಕಸಭೆ ಚುನಾವಣೆ: ದುರ್ಬಳಕೆ ತಡೆಯಲು ಫೇಸ್‌ಬುಕ್‌ನಿಂದ ಕ್ಷಿಪ್ರ ಕಾರ್ಯ ಪಡೆ

ಚೆನ್ನೈ, ಅ. 6: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದಲ್ಲಿ ಫೇಸ್‌ಬುಕ್ ಅನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ನೂರಾರು ಜನರನ್ನು ಒಳಗೊಂಡ ಕ್ಷಿಪ್ರ ಕಾರ್ಯ ಪಡೆ ಸ್ಥಾಪಿಸಲಾಗುವುದು ಎಂದು ಫೇಸ್‌ಬುಕ್ ಶನಿವಾರ ಹೇಳಿದೆ.
2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಜ್ಞರ ಗುಂಪೊಂದು ರಾಜಕೀಯ ಪಕ್ಷಗಳೊಂದಿಗೆ ಕಾರ್ಯ ನಿರ್ವ ಹಿಸಲಿದೆ ಎಂದು ಪಾಲಿಸಿ ಫಾರ್ ಯುರೋಪ್, ಇಎಂಇಎಯ ಉಪಾಧ್ಯಕ್ಷ ರಿಚರ್ಡ್ ಅಲೆನ್ ಇಂದಿಲ್ಲಿ ಮಾದ್ಯಮಕ್ಕೆ ತಿಳಿಸಿದ್ದಾರೆ. ಭಾರತದಲ್ಲಿ ಚುನಾವಣಾ ಸಂಬಂಧಿ ನಿಂದನೆಗಳ ಎಲ್ಲ ಮಾದರಿಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಭದ್ರತಾ ತಜ್ಞರು ಹಾಗೂ ಕಂಟೆಂಟ್ ತಜ್ಞರನ್ನು ಈ ತಂಡ ಒಳಗೊಳ್ಳಲಿದೆ ಎಂದು ಅವರು ಹೇಳಿದರು. ಹೊಸದಿಲ್ಲಿಯಲ್ಲಿ ಫೇಸ್‌ಬುಕ್‌ನ ಸಮುದಾಯ ಗುಣಮಟ್ಟ ಕಾರ್ಯಾಗಾರದ ಸಂದರ್ಭ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
Next Story





