ನ್ಯೂಯಾರ್ಕ್ ನಲ್ಲಿ ಭೀಕರ ರಸ್ತೆ ಅಪಘಾತ: 20 ಮಂದಿ ಮೃತ್ಯು
ನ್ಯೂಯಾರ್ಕ್, ಅ.7: ಎರಡು ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 20 ಮಂದಿ ಮೃತಪಟ್ಟಿರುವ ಘಟನೆ ಅಪ್ ಸ್ಟೇಟ್ ನ್ಯೂಯಾರ್ಕ್ ನಲ್ಲಿ ರವಿವಾರ ಸಂಭವಿಸಿದೆ.
ಮದುವೆ ಕಾರ್ಯಕ್ರಮವೊಂದಕ್ಕೆ ವಿಲಾಸಿ ಕಾರೊಂದರಲ್ಲಿ ತಂಡವೊಂದು ತೆರಳುತ್ತಿದ್ದು, ಶೋಹರಿ ಸಮೀಪ ಮತ್ತೊಂದು ವಾಹನಕ್ಕೆ ಢಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ 20 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
“ಅಪಘಾತದಲ್ಲಿ ಮೃತಪಟ್ಟವರ ಹೆಸರನ್ನು ಈಗ ಬಿಡುಗಡೆಗೊಳಿಸಲಾಗದು. ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ತೆರಳಿದ್ದಾರೆ” ಎಂದು ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
Next Story