ಬೆಂಗಳೂರು : ಮಾಲಿನ್ಯದ ಬಗ್ಗೆ ಅರಿವು ಮೂಡಿಸುವ ಸೈಕಲ್ ಜಾಥಾ
ಬೆಂಗಳೂರು, ಅ.7: ವಾಯುಮಾಲಿನ್ಯದ ಬಗ್ಗೆ ನಗರದ ಜನರನ್ನು ಜಾಗೃತಿಗೊಳಿಸುವ ಉದ್ದೇಶದಿಂದ ನಗರದಲ್ಲಿಂದು ಸೈಕಲ್ ಡೇ ಹಮ್ಮಿಕೊಳ್ಳಲಾಯಿತು.
ಸುಬ್ರಮಣ್ಯನಗರದಿಂದ ಆರಂಭವಾದ ಸೈಕಲ್ ರ್ಯಾಲಿ ಪಂಪಮಹಾಕವಿ ರಸ್ತೆ, ಗಾಯಿತ್ರಿ ನಗರದ ಮೂಲಕ ಮತ್ತೆ ಸುಬ್ರಮಣ್ಯ ನಗರದಲ್ಲಿ ಅಂತ್ಯಗೊಂಡಿತು.
ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರತನಕ ಸೈಕಲ್ ಏರಿ ವಾಯುಮಾಲಿನ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು. ಬೆಳಗ್ಗೆ ಸಂಗೊಳ್ಳಿ ರಾಯಣ್ಣ ಉದ್ಯಾನವನದ ನಡಿಗೆದಾರರ ಸಂಘದ ಅಧ್ಯಕ್ಷ ಗೋಪಾಲಸ್ವಾಮಿ, ಪಾಲಿಕೆ ಸದಸ್ಯ ಮಂಜುನಾಥ್ ಹಾಗೂ ಬಿ ಪ್ಯಾಕ್‌ನ ಕಾವೇರಿ ಕೇದರ್‌ನಾಥ್ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಗೋಪಾಲಸ್ವಾಮಿ, ನಗರದ ಜನರು ಹೆಚ್ಚು ಹೆಚ್ಚು ಸೈಕಲ್ ಬಳಸುವಂತಾಗಲು ಪ್ರೇರೇಪಿಸುವುದು ಹಾಗೂ ಮಾಲಿನ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿತ್ತು ಎಂದರು.
ಸುಬ್ರಹ್ಮಣ್ಯ ನಗರ ಮೆಟ್ರೊ ನಿಲ್ದಾಣ 4 ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಜನರು ಹೆಚ್ಚು ಸೈಕಲ್ ಬಳಸುವಂತೆ ಜನರಲ್ಲಿ ಉತ್ತೇಜಿಸುವ ದೃಷ್ಟಿಯಿಂದ ಸೈಕಲ್ ಡೇ ಹಮ್ಮಿಕೊಳ್ಳಲಾಗಿತ್ತು ಎಂದರು..





