ಅಕ್ರಮ ಕೋಳಿ ಅಂಕದ ಅಡ್ಡೆಗೆ ದಾಳಿ: 10 ಮಂದಿ ಆರೋಪಿಗಳ ಬಂಧನ
ಬಂಟ್ವಾಳ, ಅ. 7: ಅಕ್ರಮ ಕೋಳಿ ಅಂಕದ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಕೋಳಿ ಅಂಕಕ್ಕೆ ಬಳಸಿದ ಸೊತ್ತುಗಳ ಸಹಿತ 10 ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದಲ್ಲಿ ರವಿವಾರ ನಡೆದಿದೆ.
ಇಲ್ಲಿನ ನಿವಾಸಿಗಳಾದ ರವೀಂದ್ರ (40), ನಾರಾಯಣ (30), ಕೇಶವ (36), ಈಶ್ವರ (49), ನಾರಾಯಣ (52), ಬಾಬು (52), ಗಣೇಶ್ (45), ರವೀಂದ್ರ ಯಾನೆ ಬೇಬಿ (33), ರಾಜೇಶ್ (30). ಆಶಿಸ್ ಮನ್ಸೂರ್ (29) ಬಂಧಿತ ಆರೋಪಿಗಳು. ಬಂಧಿತರಿಂದ 3,300 ರೂ, 6 ಹುಂಜ ಕೋಳಿಗಳು ಹಾಗೂ ಬಾಳು ಕತ್ತಿಯನ್ನು ವಶಪಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಸಂಜೆ ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಹೇಮಾಜೆಯ ಮಿನಾವು ಎಂಬ ಸರಕಾರಿ ಗುಡ್ಡ ಜಾಗದಲ್ಲಿ ಅಕ್ರಮ ಕೋಳಿ ಅಂಕದಲ್ಲಿ ತೊಡಗಿಕೊಂಡಿದ್ದ ಖಚಿತ ಮಾಹಿತಿ ಮೇರೆಗೆ ವಿಟ್ಲ ಸಹಾಯಕ ಪೆÇಲೀಸ್ ಉಪ ನಿರೀಕ್ಷ ಧನಂಜಯ ಅವರ ನೇತೃತ್ವದ ತಂಡ ಈ ದಾಳಿ ನಡೆಸಿದೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





