ನಟ ನಾನಾ ಪಾಟೇಕರ್ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾ

ಮುಂಬೈ, ಅ. 7: ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಶನಿವಾರ ಪ್ರಕರಣ ದಾಖಲಿಸಿದ್ದಾರೆ. ‘ಹಾರ್ನ್ ಓಕೆ ಪ್ಲೀಸ್...’ ಸಿನೆಮಾದ ಹಾಡಿನ ಚಿತ್ರೀಕರಣದ ಸಂದರ್ಭ ನಾನಾ ಪಾಟೇಕರ್ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ತನುಶ್ರೀ ದತ್ತಾ ಇತ್ತೀಚೆಗೆ ಆರೋಪಿಸಿದ್ದರು.
ನಟ ನಾನಾ ಪಾಟೇಕರ್, ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ, ನಿರ್ಮಾಪಕ ಸಮೀರ್ ಸಿದ್ದೀಕಿ ಹಾಗೂ ನಿರ್ದೇಶಕ ರಾಕೇಶ್ ಸಾರಂಗ ವಿರುದ್ಧ ತನುಶ್ರೀ ದತ್ತಾ ಒಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾವು ಪ್ರಕರಣ ದಾಖಲಿಸಿದ್ದೇವೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ದತ್ತಾ ಅವರ ವಕೀಲ ನಿತಿನ್ ಸುತ್ಪುಟೆ ತಿಳಿಸಿದ್ದಾರೆ.
ಈ ಹಿಂದೆ 2008ರಲ್ಲಿ ಕೂಡ ತನುಶ್ರೀ ದತ್ತಾ ಅವರು ಇದೇ ರೀತಿಯ ಪ್ರಕರಣ ದಾಖಲಿಸಿದ್ದರು.
Next Story





