ದಾವಣಗೆರೆ: ಗೃಹಿಣಿ ಆತ್ಮಹತ್ಯೆ; ಕೊಲೆ ಆರೋಪ

ದಾವಣಗೆರೆ,ಅ.8: ಮದುವೆಯಾಗಿ 6 ವರ್ಷವಾದರೂ ಮಕ್ಕಳಾಗಿಲ್ಲವೆಂದು ಮನನೊಂದು ಗೃಹಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಗೃಹಿಣಿ ಸಂಬಂಧಿಕರು ಆರೋಪಿಸಿದ್ದಾರೆ.
ದಾವಣಗೆರೆ ಹೊರವಲಯದ ಯರಗುಂಟೆ ಗ್ರಾಮದ ನೇತ್ರಾವತಿ (26) ಸಾವಿನಪ್ಪಿದ ಗೃಹಿಣಿ. ಕಳೆದ 6 ವರ್ಷದ ಹಿಂದೆ ಯರಗುಂಟೆಯ ಕರಿಯಪ್ಪ ಅವರಿಗೆ ನೇತ್ರಾವತಿಯನ್ನು ಮದುವೆ ಮಾಡಿಕೊಡಲಾಗಿತ್ತು. ಆದರೆ ಈವರೆಗೂ ಮಕ್ಕಳಾಗಿಲ್ಲ. ಇದರಿಂದ ನೇತ್ರಾವತಿ ನೇಣಿಗೆ ಶರಣಾಗಿದ್ದಾಳೆ ಎಂದು ಪತಿ ಮನೆಯವರು ತಿಳಿಸಿದ್ದಾರೆ. ಆದರೆ, ಆಕೆಯನ್ನು ಕೊಲೆಮಾಡಲಾಗಿದೆ ಎಂದು ಮೃತ ನೇತ್ರಾವತಿ ಪೋಷಕರು ಆರೋಪಿಸಿ, ದೂರು ನೀಡಿದ್ದಾರೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





