ಬೆಂಗಳೂರು: ಎಸೆಸ್ಸೆಫ್‌ನಿಂದ ಚುನಾವಣಾ ಕಾರ್ಯಾಗಾರ
ಬೆಂಗಳೂರು, ಅ.8: ಯೌವ್ವನ ಮರೆಯಾಗುವ ಮುನ್ನ ಎಂಬ ಧ್ಯೇಯ ವಾಕ್ಯದೊಂದಿಗೆ ಎಸೆಸ್ಸೆಫ್‌ನ ಸದಸ್ಯತ್ವ ಅಭಿಯಾನವು ನ.1ರಿಂದ 15ರವರೆಗೆ ನಡೆಯಲಿದ್ದು, ಅದರ ಭಾಗವಾಗಿ ನಗರದ ಜಿಲ್ಲಾ ಕಚೇರಿಯಲ್ಲಿ ಚುನಾವಣಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ನಾವುಂದ ಕಾರ್ಯಾಗಾರವನ್ನು ಉದ್ಘಾಟಿಸಿದರು. ರಾಜ್ಯ ಸದಸ್ಯ ಹಮೀದ್ ಮುಸ್ಲಿಯಾರ್ ಶಿವಮೊಗ್ಗ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಜ್ಯ ಚುನಾವಣಾ ಕಮಿಟಿ ಸಂಚಾಲಕ ಹಾಫಿಳ್ ಯಾಕುಬ್ ಸಅದಿ ಕಾರ್ಯಾಗಾರದಲ್ಲಿ ತರಬೇತಿ ನೀಡಿದರು. ಜಿಲ್ಲಾ ಚುನಾವಣಾ ಕಮಿಟಿಯ ಅಧ್ಯಕ್ಷ ಹಬೀಬುಲ್ಲ ನೂರಾನಿ ಉಸ್ತಾದ್ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ವಹಿಸಿದ್ದರು.
ರಾಜ್ಯ ಕೋಶಾಧಿಕಾರಿ ಶರೀಫ್ ಮಾಸ್ಟರ್, ರವೂಫ್, ಜಿಲ್ಲಾ ಅಧ್ಯಕ್ಷ ತಾಜುದ್ದೀನ್ ಫಾಳಿಲಿ, ಹಾಗೂ ಜಿಲ್ಲಾ ವಿಭಾಗದ ನಾಯಕರು ಹಾಗೂ ಆಯ್ಕೆಗೊಂಡ ಎಲ್ಲ ಯುನಿಟ್ ಚುನಾವಣೆ ಕಮಿಟಿ ಸದಸ್ಯರು ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಶಿಹಾಬ್ ಮಡಿವಾಳ ಸ್ವಾಗತಿಸಿ ವಂದಿಸಿದರು.
Next Story





