‘ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು’ ಬಾಲನಟರಿಗೆ ಸಾಧನಾ ಪ್ರಶಸ್ತಿ
ಮಂಗಳೂರು, ಅ.8: ಕನ್ನಡ ಚಿತ್ರರಂಗದಲ್ಲಿ ಕನ್ನಡ ಜಾಗೃತಿ ಹಾಗೂ ಸಂಚಲವನ್ನುಂಟು ಮಾಡಿರುವ ಬಲು ಅಪರೂಪದ ಸಿನೆಮಾ ‘ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು’ ಇದರಲ್ಲಿ ಬಾಲನಟರಾಗಿ ಅಭಿನಯಿಸಿರುವ ರಂಜನ್ ಸಾಜು, ಸಂಪತ್ ಗಣೇಶ್, ಅತೀಶ್ ಎಸ್. ಶೆಟ್ಟಿ, ಸಪ್ತ ಪಾವೂರು, ಪ್ರಕೃತಿ ಡಿ. ಅಮೀನ್ ಅವರಿಗೆ ಅ.10ರಂದು ನಡೆಯುವ ಕಾರಂತ ಹುಟ್ಟು ಹಬ್ಬ ಸಮಾರಂಭದಲ್ಲಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಮಂಗಳೂರು ಪುರಭವನದಲ್ಲಿ ಅ.10 ಸಂಜೆ 4ರಿಂದ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





