‘ಕಲ್ಕೂರ ಯುವ ಪ್ರಶಸ್ತಿ’ಗೆ ವಿಜಿತ್ ಕೆ. ಆಯ್ಕೆ

ಮಂಗಳೂರು, ಅ.8: ಎಳೆಯ ಪ್ರಾಯದಲ್ಲೇ ತಬಲಾ ವಾದಕನಾಗಿ ಸಾಧನೆಗೈದು ದ.ಕ. ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ‘ಮಿನಿಝಾಕಿರ್ ಹುಸೈನ್’ ಎಂದೇ ಪ್ರಖ್ಯಾತರಾದ ರಾಷ್ಟ್ರೀಯ ಮಟ್ಟದಲ್ಲೂ ಮಿಂಚಿರುವ ವಿಜಿತ್ ಕೆ. ‘ಕಲ್ಕೂರ ಯುವ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಮೈಸೂರಿನ ಎನ್.ಐ.ಇ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ವಿಜಿತ್ ಅವರನ್ನು ಅ.10ರಂದು ಮಂಗಳೂರು ಪುರಭವನದಲ್ಲಿ ಜರಗಲಿರುವ ‘ಕಾರಂತ ಹುಟ್ಟುಹಬ್ಬ ಸಮಾರಂಭದಲ್ಲಿ ಜಿಲ್ಲಾಉಸ್ತುವಾರಿ ಸಚಿವ ಯು.ಟಿ. ಖಾದರ್ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು.
ಈ ಸಂದರ್ಭ ವಿಶೇಷ ಚೇತನ ವಿದ್ಯಾರ್ಥಿ ರಾಷ್ಟ್ರೀಯ ಮಟ್ಟದ ಚೆಸ್ ಆಟಗಾರ್ತಿ ಯಶಸ್ವಿ ಕೆ. ಅವರಿಗೂ ‘ಕಲ್ಕೂರ ಯುವ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





