ಅಮೆರಿಕದ ಬೋಯಿಂಗ್‌ನ ಎಫ್-15 ಯುದ್ಧವಿಮಾನ ಕಾರ್ಯಕ್ರಮ ಮುನ್ನಡೆಸಲಿರುವ ಭಾರತೀಯ

ಹೊಸದಿಲ್ಲಿ, ಅ.8: ಅಮೆರಿಕದಲ್ಲಿ ನಡೆಯಲಿರುವ ಬೋಯಿಂಗ್‌ನ ಎಫ್-15 ಯುದ್ಧವಿಮಾನ ಕಾರ್ಯಕ್ರಮವನ್ನು ಸಂಸ್ಥೆಯ ಭಾರತದ ಅಧ್ಯಕ್ಷ ಪ್ರತ್ಯೂಶ್ ಕುಮಾರ್ ಮುನ್ನಡೆಸಲಿರುವುದಾಗಿ ಸಂಸ್ಥೆ ಸೋಮವಾರದ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಭಾರತದಲ್ಲಿ ತನ್ನ ಐದು ವರ್ಷಗಳ ಸೇವಾವಧಿಯಲ್ಲಿ ಪ್ರತ್ಯೂಶ್ ಕುಮಾರ್, ವಾಣಿಜ್ಯ ವಿಮಾನಗಳು, ರಕ್ಷಣಾ ಬಾಹ್ಯಾಕಾಶ ಮತ್ತು ಭದ್ರತೆ ಹಾಗೂ ಜಾಗತಿಕ ಸೇವೆಯಲ್ಲಿ ಸಂಸ್ಥೆಯ ವ್ಯವಹಾರವನ್ನು ಬಹಳಷ್ಟು ವಿಸ್ತರಿಸಿದ್ದಾರೆ ಎಂದು ಸಂಸ್ಥೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಕುಮಾರ್ ಅವಧಿಯಲ್ಲಿ ನಾವು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸಿದ್ದೇವೆ, ಬಾಹ್ಯಾಕಾಶ ಯಾನ ಪೂರೈಕೆಯಲ್ಲಿ ಹೊಸ ಮೈಲಿಗಲ್ಲು ಕ್ರಮಿಸಿದ್ದೇವೆ ಮತ್ತು ಅಪಾಚೆ ದಾಳಿ ಹೆಲಿಕಾಪ್ಟರ್‌ನ ಬಿಡಿಭಾಗದ ನಿರ್ಮಾಣಕ್ಕಾಗಿ ಟಾಟಾ ಜೊತೆ ಜಂಟಿ ಯೋಜನೆಯನ್ನು ರೂಪಿಸಿದ್ದೇವೆ ಎಂದು ಸಂಸ್ಥೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
Next Story





