ತ್ರಿಪುರ ಪೌರರ ಪಟ್ಟಿ ಕುರಿತ ಅರ್ಜಿ: ಕೇಂದ್ರದ ಪ್ರತಿಕ್ರಿಯೆಗೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ಅ.8: ತ್ರಿಪುರ ರಾಜ್ಯದಲ್ಲಿ ಅಕ್ರಮ ವಲಸಿಗರನ್ನು ಗುರುತಿಸುವ ಉದ್ದೇಶದಿಂದ ರಾಷ್ಟ್ರೀಯ ನೋಂದಣಿ ಪುಸ್ತಕ(ಎನ್‌ಆರ್‌ಸಿ)ದಲ್ಲಿ ತ್ರಿಪುರ ನಾಗರಿಕರ ಹೆಸರು ಸೇರಿಸಲು ಕೋರಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ತ್ರಿಪುರ ಪೀಪಲ್ಸ್ ಫ್ರಂಟ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಹಾಗೂ ನ್ಯಾಯಾಧೀಶರಾದ ಎಸ್‌ಕೆ ಕೌಲ್ ಮತ್ತು ಕೆಎಂ ಜೋಸೆಫ್ ಅವರಿದ್ದ ನ್ಯಾಯಪೀಠ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. 20ನೇ ಶತಮಾನದಿಂದಲೂ ಬಾಂಗ್ಲಾದೇಶದಿಂದ ಜನರ ಒಳನುಸುಳುವಿಕೆ ಸಮಸ್ಯೆಗೊಳಗಾಗಿರುವ ಅಸ್ಸಾಂ ಎನ್‌ಆರ್‌ಸಿ ಹೊಂದಿರುವ ಏಕೈಕ ರಾಜ್ಯವಾಗಿದೆ.
Next Story





