ಕಡಿಯಾಳಿ: ಮಹಿಳಾ ದಾಂಡಿಯಾ ನೃತ್ಯ
ಉಡುಪಿ, ಅ.11: ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ ಇದರ ಮಹಿಳಾ ಮಂಡಳಿಯ ವತಿಯಿಂದ ನವರಾತ್ರಿಯ ಅಂಗ ವಾಗಿ ಅ.13ರ ಶನಿವಾರ ಸಂಜೆ 7 ಗಂಟೆಗೆ ಕುಂಜಿಬೆಟ್ಟು ಗ್ರಾಹಕರ ವಿವಿದೋದ್ದೇಶ ಸಹಕಾರಿ ಸಂಘದ ಪಾರ್ಕಿಂಗ್ ಸ್ಥಳದಲ್ಲಿ ಮಹಿೆಯರಿಗೆ ದಾಂಡಿಯಾ ನೃತ್ಯ ನಡೆಯಲಿದೆ.
ಈ ದಾಂಡಿಯಾ ನೃತ್ಯದಲ್ಲಿ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದು ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕಡಿಯಾಳಿ ಇದರ ಅಧ್ಯಕ್ಷ ಪ.ವಸಂತ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story