ಶಬರಿಮಲೆ ಪ್ರವೇಶಿಸುವ ಮಹಿಳೆಯರನ್ನು ಅರ್ಧಕ್ಕೆ ಸೀಳಬೇಕು: ನಟ ಕೊಲ್ಲಂ ತುಳಸಿ ವಿವಾದಿತ ಹೇಳಿಕೆ

ಕೊಲ್ಲಂ,ಅ.12: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಆಗಮಿಸುವ ಮಹಿಳೆಯರನ್ನು ಅರ್ಧಕ್ಕೆ ಸೀಳಿ ಹಾಕಬೇಕು ಎಂದು ನಟ ಕೊಲ್ಲಂ ತುಳಸಿ ವಿವಾದಿತ ಹೇಳಿಕೆ ನೀಡಿದ್ದಾರೆ. ಇಷ್ಟಕ್ಕೇ ನಿಲ್ಲದ ಬಿಜೆಪಿ ಸಮರ್ಥಕ, ಎರಡು ಭಾಗವಾಗಿ ಕತ್ತರಿಸಿದ ಮಹಿಳೆಯ ಒಂದು ಭಾಗವನ್ನು ತಿರುವನಂತಪುರಂನಲ್ಲಿರುವ ಮುಖ್ಯಮಂತ್ರಿಯ ಕಚೇರಿಗೆ ಎಸೆದರೆ ಇನ್ನೊಂದು ಭಾಗವನ್ನು ದಿಲ್ಲಿಗೆ ಎಸೆಯಬೇಕು ಎಂದು ತಿಳಿಸಿದ್ದಾರೆ. ಮಲಯಾಳಂ ಸಿನೆಮಾ ನಟನಾಗಿರುವ ಕೊಲ್ಲಂ ತುಳಸಿ ಕೇರಳದಲ್ಲಿ ನಡೆದ ಎನ್‌ಡಿಎ ರ್ಯಾಲಿಯಲ್ಲಿ ಮಾತನಾಡುತ್ತಿದ್ದರು. ಕಳೆದ ತಿಂಗಳು ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದಲ್ಲಿ ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50ರ ಹರೆಯದ ಒಳಗಿನ ಮಹಿಳೆಯರ ಪ್ರವೇಶಕ್ಕೆ ಇದ್ದ ಶತಮಾನಗಳಷ್ಟು ಹಳೆಯ ನಿಷೇಧವನ್ನು ತೆರವುಗೊಳಿಸಲಾಗಿತ್ತು. ನ್ಯಾಯಾಲಯದ ಈ ಆದೇಶಕ್ಕೆ ಕೇರಳ ಸೇರಿದಂತೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ.
Next Story





