ಪತ್ರಕರ್ತ ವಿನೋದ್ ದುವಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಹೊಸದಿಲ್ಲಿ, ಅ.14: ಪತ್ರಕರ್ತ ವಿನೋದ್ ದುವಾ ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಿರ್ದೇಶಕಿಯೊಬ್ಬರು ಆರೋಪಿಸಿದ್ದಾರೆ.
ತನ್ನ ‘ಮೀಟೂ’ ಕಥೆಯನ್ನು ನಿರ್ದೇಶಕಿ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಉದ್ಯೋಗಕ್ಕಾಗಿ ಸಂದರ್ಶನಕ್ಕೆ ತೆರಳಿದ್ದ ವೇಳೆ ವಿನೋದ್ ಅಶ್ಲೀಲ ಜೋಕ್ ಗಳನ್ನು ಹೇಳಿದ್ದರು ಎಂದು ಆರೋಪಿಸಿದ್ದಾರೆ.
“ನಾನು ಬೇರೆಡೆಯಲ್ಲಿ ಕೆಲಸಕ್ಕೆ ಸೇರಿದ್ದೆ. ನಾನು ಒಂದು ದಿನ ಪಾರ್ಕಿಂಗ್ ಗೆ ಬಂದಾಗ ಅವರು ಅಲ್ಲಿ ನಿಂತಿದ್ದರು. ಮಾತನಾಡಲಿಕ್ಕಿದೆ, ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದರು. ನಾನು ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಅಸಭ್ಯವಾಗಿ ವರ್ತಿಸಿದರು” ಎಂದು ನಿರ್ದೇಶಕಿ ಆರೋಪಿಸಿದ್ದಾರೆ.
Next Story





