Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಾರತದ ಶೇ.21ರಷ್ಟು ಮಕ್ಕಳಲ್ಲಿ...

ಭಾರತದ ಶೇ.21ರಷ್ಟು ಮಕ್ಕಳಲ್ಲಿ ಪೌಷ್ಟಿಕಾಂಶದ ತೀವ್ರ ಕೊರತೆ

ಜಾಗತಿಕ ಹಸಿವು ಸೂಚ್ಯಂಕ ವರದಿ

ವಾರ್ತಾಭಾರತಿವಾರ್ತಾಭಾರತಿ14 Oct 2018 10:01 PM IST
share
ಭಾರತದ ಶೇ.21ರಷ್ಟು  ಮಕ್ಕಳಲ್ಲಿ ಪೌಷ್ಟಿಕಾಂಶದ ತೀವ್ರ ಕೊರತೆ

ಹೊಸದಿಲ್ಲಿ,ಅ.14: ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿ ಐವರು ಭಾರತೀಯ ಮಕ್ಕಳಲ್ಲಿ ಓರ್ವ ಎತ್ತರಕ್ಕೆ ಅನುಗುಣವಲ್ಲದ ಅತ್ಯಂತ ಕಡಿಮೆ ದೇಹತೂಕವನ್ನು ಹೊಂದಿದ್ದು,ಇದು ಪೌಷ್ಟಿಕಾಂಶದ ತೀವ್ರ ಕೊರತೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಜಾಗತಿಕ ಹಸಿವು ಸೂಚಿ(ಜಿಎಚ್‌ಐ) 2018 ಬೆಟ್ಟು ಮಾಡಿದೆ.

ಮಕ್ಕಳ ತೂಕ ಎತ್ತರಕ್ಕೆ ಅನುಗುಣವಾಗಿದ್ದರೆ ಅದು ಉತ್ತಮ ಪೋಷಣೆಯನ್ನು ಸೂಚಿಸುತ್ತದೆ. ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳ ದೇಹತೂಕ ಎತ್ತರಕ್ಕೆ ಅನುಗುಣವಾಗಿರದೆ ಅತ್ಯಂತ ಕಡಿಮೆ ಯಾಗಿದ್ದರೆ ಅದನ್ನು ಚೈಲ್ಡ್ ವೇಸ್ಟಿಂಗ್ ಎಂದು ಕರೆಯಲಾಗುತ್ತದೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಚೈಲ್ಡ ವೇಸ್ಟಿಂಗ್ ಸಮಸ್ಯೆಯನ್ನೆದುರಿಸುತ್ತಿರುವ ಏಕೈಕ ರಾಷ್ಟ್ರ ಯುದ್ಧಸಂತ್ರಸ್ತ ದಕ್ಷಿಣ ಸುಡಾನ್ ಅಗಿದೆ ಎಂದು ಗುರುವಾರ ಬಿಡುಗಡೆಗೊಂಡ ಜಿಎಚ್‌ಐ ವರದಿಯು ಹೇಳಿದೆ.

ದೇಶದಲ್ಲಿ ಹಸಿವಿನ ಮಟ್ಟಗಳನ್ನು ‘ಗಂಭೀರ’ ಎಂದು ವರ್ಗೀಕರಿಸಲಾಗಿರುವ ಸೂಚಿಯಲ್ಲಿನ 119 ರಾಷ್ಟ್ರಗಳ ಪೈಕಿ ಭಾರತವು 103ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ರ್ಯಾಂಕಿಂಗ್ ಮೂರು ಸ್ಥಾನಗಳಷ್ಟು ಕೆಳಗಿಳಿದಿದೆ.

ವೆಲ್ತೂಂಗೆರೆಹಿಲ್ಫೆ ಆ್ಯಂಡ್ ಕನ್ಸರ್ನ್ ವರ್ಲ್ಡ್‌ವೈಲ್ಡ್ ವಾರ್ಷಿಕವಾಗಿ ಬಿಡುಗಡೆಗೊಳಿಸುವ ವರದಿಯಲ್ಲಿ ಹಸಿವಿನ ಮಟ್ಟಗಳನ್ನು ಲೆಕ್ಕ ಹಾಕಲು ನಾಲ್ಕು ಮುಖ್ಯ ಸೂಚಕಗಳನ್ನು ಬಳಸಲಾಗಿದೆ.

ಕುಪೋಷಣೆ ಮೊದಲ ಸೂಚಕವಾಗಿದೆ. ಇದು ಪೌಷ್ಟಿಕಾಂಶ ಕೊರತೆಯಿರುವ, ಜನಸಂಖ್ಯೆಯ ಶೇಕಡಾವಾರು ಭಾಗವಾಗಿದ್ದು ಕ್ಯಾಲರಿಗಳ ಸೇವನೆಯಲ್ಲಿ ಕೊರತೆಯನ್ನು ಪ್ರತಿಬಿಂಬಿಸುತ್ತದೆ. ಇತರ ಮೂರು ಸೂಚಕಗಳು ಚೈಲ್ಡ್ ವೇಸ್ಟಿಂಗ್,ತೀವ್ರ ಅಪೌಷ್ಟಿಕತೆ,ಕುಬ್ಜತೆ ಮತ್ತು ಮಕ್ಕಳ ಸಾವುಗಳ ಪ್ರಮಾಣ ಇತ್ಯಾದಿಗಳನ್ನೊಳಗೊಂಡಿರುವ ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿಗಾಗಿರುವ ದತ್ತಾಂಶಗಳನ್ನು ಬಳಸುತ್ತವೆ.

ಪ್ರಸ್ತಾಪಿತ ಅವಧಿಯಲ್ಲಿ ಭಾರತವು ಮೂರು ಸೂಚಕಗಳಲ್ಲಿ ಸುಧಾರಣೆಗಳನ್ನು ತೋರಿಸಿದೆ. 2000ರಲ್ಲಿ ಜನಸಂಖ್ಯೆಯ ಶೇ.18.2ರಷ್ಟಿದ್ದ ಕುಪೋಷಣೆಯ ಜನರ ಪ್ರಮಾಣ 2018ರಲ್ಲಿ ಶೇ.14.8ಕ್ಕೆ ತಗ್ಗಿದ್ದರೆ,ಮಕ್ಕಳ ಸಾವುಗಳ ಪ್ರಮಾಣ ಶೇ.9.2ರಿಂದ ಶೇ.4.3ಕ್ಕೆ ಇಳಿದಿದೆ. ಬೆಳವಣಿಗೆ ಕುಂಠಿತ ಅಥವಾ ಕುಬ್ಜತೆಯ ಪ್ರಮಾಣ ಶೇ.54.2ರಿಂದ ಶೇ.38.4ಕ್ಕೆ ತಗ್ಗಿದೆ. ಆದರೆ ಚೈಲ್ಡ್ ವೇಸ್ಟೇಜಿಂಗ್ ಸ್ಥಿತಿ ಹದೆಗೆಟ್ಟಿದೆ. 2000ರಲ್ಲಿ ಶೇ.17.1 ರಷ್ಟಿದ್ದ ಅದು 2005ರಲ್ಲಿ ಶೇ.20ಕ್ಕೇರಿತ್ತು. 2018ರಲ್ಲಿ ಶೇ.21ನ್ನು ತಲುಪಿದೆ. ಈ ಪ್ರಮಾಣ ದಕ್ಷಿಣ ಸುಡಾನ್‌ನಲ್ಲಿ ಶೇ.28ರಷ್ಟಿದೆ ಎಂದು ವರದಿಯು ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X