ಲೈಂಗಿಕ ದೌರ್ಜನ್ಯ ಆರೋಪ : ಸಚಿವ ಎಂ.ಜೆ.ಅಕ್ಬರ್ ವಜಾಕ್ಕೆ ಒತ್ತಾಯ
ಬೆಂಗಳೂರು, ಅ.14: ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಕೇಂದ್ರ ಸಚಿವ ಎಂ.ಜೆ.ಅಕ್ಬರ್‌ರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಎಐಎಮ್‌ಎಸ್‌ಎಸ್ ರಾಜ್ಯ ಕಾರ್ಯದರ್ಶಿ ಶೋಭಾ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಏಳು ಪತ್ರಕರ್ತೆಯರೊಂದಿಗೆ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಅಸಭ್ಯವಾಗಿ ವರ್ತಿಸಿರುವ ಕುರಿತು ಆರೋಪಕ್ಕೆ ಕೇಳಿ ಬಂದಿದೆ. ದೇಶವನ್ನು ಮುನ್ನೆಡಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಿಲುಕಿರುವುದು ಅವಮಾನಕರ ಸಂಗತಿಯಾಗಿದೆ. ಹೀಗಾಗಿ ಆರೋಪ ಹೊತ್ತಿರುವ ಸಚಿವರಿಂದ ಈ ಕೂಡಲೆ ರಾಜಿನಾಮೆ ಪಡೆಯಬೇಕೆಂದು ತಿಳಿಸಿದರು.
ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರು ಬಹಿರಂಗವಾಗಿ ತಮ್ಮ ನೋವನ್ನು ಹೇಳಿಕೊಳ್ಳುವ ಮೂಲಕ ಅಂಧೋಲನಕ್ಕೆ ಚಾಲನೆ ನೀಡಿದ್ದಾರೆ. ಇದನ್ನು ಬೆಂಬಲಿಸಿ, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಾಂತ್ವಾನ ಹಾಗೂ ನ್ಯಾಯ ಕೊಡಿಸಬೇಕಿರುವುದು ಕೇಂದ್ರ ಸರಕಾರದ ಕರ್ತವ್ಯ. ಆದರೆ, ಲೈಂಗಿಕ ದೌರ್ಜನ್ಯದ ಆರೋಪಕ್ಕೆ ತುತ್ತಾಗಿರುವ ಸಚಿವರ ಯಾವುದೆ ಕ್ರಮ ಕೈಗೊಳ್ಳದೆ ಕೇಂದ್ರ ಸರಕಾರ ಮೌನ ವಹಿಸಿರುವುದು ದೇಶದ ಜನತೆಗೆ ಕೆಟ್ಟ ಸಂದೇಶ ರವಾನಿಸುತ್ತಿದೆ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆರೋಪಿಸಿದರು.







