ಜ. 3ರಿಂದ ಸುರಿಬೈಲ್ ಉಸ್ತಾದ್ ಅನುಸ್ಮರಣಾ ಸಮ್ಮೇಳನ
ಸ್ವಾಗತ ಸಮಿತಿ ರಚನೆ

ಬಂಟ್ವಾಳ, ಅ. 15: ದಾರುಲ್ ಅಶ್-ಅರಿಯ್ಯಾ ವಿದ್ಯಾ ಸಂಸ್ಥೆಯ ಮರ್‍ಹೂಂ ಸುರಿಬೈಲ್ ಉಸ್ತಾದರ 17ನೆ ಅನುಸ್ಮರಣಾ ಸಮ್ಮೇಳನ 2019ರ ಜ. 3ಮತ್ತು 4ರಂದು ಅಶ್-ಅರಿಯ್ಯಾ ವಠಾರದಲ್ಲಿ ನಡೆಯಲಿದ್ದು, ಇದರ ಸ್ವಾಗತ ಸಮಿತಿ ರಚನಾ ಸಭೆಯು ದಾರುಲ್ ಅಶ್-ಅರಿಯ್ಯಾ ಸಭಾಂಗಣದಲ್ಲಿ ರವಿವಾರ ನಡೆಯಿತು.
ಅಶ್-ಅರಿಯ್ಯಾ ಕೇಂದ್ರೀಯ ಸಮಿತಿ ಸದಸ್ಯ ಅಬೂಬಕರ್ ಮುಸ್ಲಿಯಾರ್ ಕೊಡುಂಗೈ ಸಭೆಯನ್ನು ಉದ್ಘಾಟಿಸಿದರು. ಸಂಸ್ಥೆಯ ಮ್ಯಾನೇಜರ್ ಸಿ.ಎಚ್ ಮುಹಮ್ಮದಾಲಿ ಸಖಾಫಿ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಸೈಯದ್ ಶಿಹಾಬುದ್ದೀನ್ ಮದಕ ತಂಙಳ್, ಸಲಹಾ ಸಮಿತಿ ಸದಸ್ಯರಾಗಿ ವಾಲೆಮಂಡೋವು ಮಹಮೂದ್ ಫೈಝಿ, ಅಬೂಬಕರ್ ಮುಸ್ಲಿಯಾರ್ ಬೋಳ್ಮಾರ್, ಇಬ್ರಾಹಿಂ ಮುಸ್ಲಿಯಾರ್ ಮಂಚಿ, ಪಿ.ಎ ಅಬ್ದುರ್ರಹ್ಮಾನ್ ಬಖಾವಿ ಅಲ್ ಜುಬೈದಿ, ಅಧ್ಯಕ್ಷರಾಗಿ ಸುಲೈಮಾನ್ ಹಾಜಿ ಸಿಂಗಾರಿ, ಪ್ರಧಾನ ಕೋಶಾಧಿಕಾರಿಯಾಗಿ ಸಿ.ಎಚ್ ಅಬೂಬಕರ್ ಚೌಕ, ಜನರಲ್ ಕನ್ವೀನರ್ ಅಬ್ದುಲ್ಲ ಮುಸ್ಲಿಯಾರ್ ದುಬೈ, ಉಪಾಧ್ಯಕ್ಷರಾಗಿ ಸುಲೈಮಾನ್ ಕೊಳಕೆ, ಸುಲೈಮಾನ್ ಕುಕ್ಕಾಜೆ, ದಾವೂದ್ ಕಲ್ಲಡ್ಕ, ಉಮರ್ ಹಾಜಿ ದಾರುಲ್ ಪೌಝ್, ಕೋಶಾಧಿಕಾರಿಗಳಾಗಿ ಮೂಸಾ ಹಾಜಿ, ಸಿದ್ದೀಕ್ ಅಳಿಕೆ, ಹಮೀದ್ ಅಶ್-ಅರಿಯ್ಯಾ ನಗರ, ಕನ್ವೀನರ್ ಗಳಾಗಿ ಅಬ್ದುಲ್ಲ ಮುಸ್ಲಿಯಾರ್, ಕೆ.ಕೆ.ಎಂ ಕಾಮಿಲ್ ಸಖಾಫಿ ಸುರಿಬೈಲ್, ಎಸ್.ಎ ಅಬ್ದುಲ್ ಹಮೀದ್ ಲತೀಫಿ ಸೇರಾಜೆ, ವರ್ಕಿಂಗ್ ಕನ್ವೀನರ್‍ಗಳಾಗಿ ಅಬ್ದುಲ್ ರಶೀದ್ ಹನೀಫಿ, ಹಕೀಂ ಹನೀಫಿ ನಿಡ್ಗಾಲ್, ಅಶ್ರಫ್ ಇಂದಾದಿ ಬಾಳೆಪುಣಿ, ಅಶ್ರಫ್ ಮುಸ್ಲಿಯಾರ್ ಸಂಪ್ಯ, ಪ್ರಚಾರ ಸಮಿತಿ ಸದಸ್ಯರಾಗಿ ಮಜೀದ್ ಕದ್ಕಾರ್, ಅಬ್ದುಲ್ ಸಲಾಂ ಹನೀಫಿ ಕಬಕ, ಖಲೀಲ್ ಮುಸ್ಲಿಯಾರ್ ಕಾವೂರು, ಅಕ್ಬರ್ ಅಲಿ ಮದನಿ, ಇಬ್ರಾಹಿಂ ಸಖಾಫಿ ಸೆರ್ಕಳ, ಲತೀಫ್ ಸಖಾಫಿ, ಕೆ.ಪಿ ಬೈಲ್ ರವರನ್ನು ಅಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉಮ್ರಾ ಯಾತ್ರೆಗೈಯುವ ಅಶ್-ಅರಿಯ್ಯಾ ಸಿಬ್ಬಂದಿ ಅಬ್ಬಾಸ್ ಮುಸ್ಲಿಯಾರ್ ಅವರನ್ನು ಸನ್ಮಾನಿಸಲಾಯಿತು. ಕೆ.ಕೆ.ಎಂ ಕಾಮಿಲ್ ಸಖಾಫಿ ಸುರಿಬೈಲ್ ಸ್ವಾಗತಿಸಿದರು. ಎಸ್.ಎ ಅಬ್ದುಲ್ ಹಮೀದ್ ಲತೀಫಿ ಸೇರಾಜೆ ವಂದಿಸಿದರು.





