ಬಂಟ್ವಾಳ: ಎಚ್1ಎನ್1 ಜ್ವರಕ್ಕೆ ಮಹಿಳೆ ಬಲಿ ?
ಬಂಟ್ವಾಳ, ಅ. 15: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಒಂದೇ ಮನೆಯ ಇಬ್ಬರಿಗೆ ಎಚ್1ಎನ್1 ಜ್ವರ ಬಾಧಿಸಿದ್ದು, ಅದರಲ್ಲಿ ಒಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಸಜಿಪನಡು ಗ್ರಾಮದಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಸಜಿಪನಡು ಗ್ರಾಮ ನಿವಾಸಿ ಮೈಯದ್ದಿ ಅವರ ಪತ್ನಿ ಅವ್ವಮ್ಮ (44) ಎಚ್1ಎನ್1 ಜ್ವರ ಬಾಧಿತರಾಗಿ ಮೃತಪಟ್ಟಿದ್ದರೆ, ಅವರ ಮಗಳು ಝುಬೀನಾ (22) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದೇ ಗ್ರಾಮದ ಜ್ವರಪೀಡಿತ ವ್ಯಕ್ತಿಯೋರ್ವರಿಗೂ ಎಚ್1ಎನ್1 ಶಂಕಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯಕೀಯ ವರದಿ ಇನ್ನಷ್ಟೇ ಬರಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಮಾಹಿತಿ ನೀಡಿದ್ದಾರೆ.
ಅವ್ವಮ್ಮ ಅವರ ಪತಿ ಮಯ್ಯದ್ದಿ ಅವರು ನ್ಯುಮೋನಿಯಾದಿಂದ ಮೃತಪಟ್ಟಿದ್ದರೆ, ಝುಬೀನಾ ಅವರ ನವಜಾತ ಶಿಶು ಸಿಂಡ್ರೋಮ್‍ನಿಂದ ಮೃತಪಟ್ಟಿರು ವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.
Next Story





