ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪೇಜಾವರಶ್ರೀ ಅಭಿನಂದನೆ
ಉಡುಪಿ, ಅ.15: ಸುಬ್ರಹ್ಮಣ್ಯ ಶ್ರೀಗಳು ಕೈಗೊಂಡ ಉಪವಾಸಕ್ಕೆ ಸ್ಪಂಧಿಸಿ ದಸರೆಯ ನಂತರ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿ ಅವರು ತಮ್ಮ ಉಪವಾಸವನ್ನು ಅಂತ್ಯಗೊಳಿಸುವಂತೆ ಮಾಡಿದ ಮುಖ್ಯಮಂತ್ರಿ ಗಳಾದ ಕುಮಾರಸ್ವಾಮಿ ಅವರನ್ನು ಅಭಿನಂದಿಸುತ್ತೇವೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ದಸರಾ ನಂತರ ಅವರ ಮುಂದಾಳತ್ವದಲ್ಲಿ ಸಮಸ್ಯೆಯು ಬಗೆಹರಿದು ಮಠ, ದೇವಾಲಯಗಳ ಪರಸ್ಪರ ಸೌಹಾರ್ದದ ಹೊಸ ಯುಗ ಆರಂಭವಾಗಿ ನರಸಿಂಹ ದೇವರು ಹಾಗೂ ಶ್ರೀಕುಮಾರಸ್ವಾಮಿಯ ವಿಶೇಷ ಅನುಗ್ರಹಕ್ಕೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಗಳು ಪಾತ್ರರಾಗಲೆಂದು ಆಶಿಸುತ್ತೇನೆ. ನಮ್ಮೆಲ್ಲರ ಮೇಲಿನ ಅಭಿಮಾನದಿಂದ ಉಪವಾಸ ಅಂತ್ಯಗೊಳಿಸಿದ ಸುಬ್ರಹ್ಮಣ್ಯ ಶ್ರೀಗಳನ್ನು ಅಭಿನಂದಿಸುತ್ತೇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಪೇಜಾವರಶ್ರೀ ತಿಳಿಸಿದ್ದಾರೆ.
Next Story





